ಶ್ರೀನಗರ, ಅ.23(Daijiworld News/SS): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಈ ಸಂದರ್ಭದಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಮೃತರನ್ನು ಪಾಕ್ನ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು ಎಂದು ಡಿಜಿಪಿ ದಿಲ್ಬಗ್ ಸಿಂಗ್ ತಿಳಿಸಿದ್ದಾರೆ.
ಪುಲ್ವಾಮಾದ ರಾಜ್ಪುರ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಜಮ್ಮು-ಕಾಶ್ಮೀರದ ಪೂಂಛ್ ಸೆಕ್ಟೆರ್ನಲ್ಲಿ ಪಾಕ್ ಪಡೆಗಳು ಕದನವಿರಾಮ ಉಲ್ಲಂಘಿಸಿ ಗುಂಡು ಹಾರಿಸಿವೆ. ಇದರಿಂದ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ಪಿಒಕೆಯ ನಾಲ್ಕು ಉಗ್ರರ ಶಿಬಿರಗಳನ್ನು ಭಾರತ ಧ್ವಂಸಗೊಳಿಸಿದ ಸ್ಥಳಕ್ಕೆ ಪತ್ರಕರ್ತರು ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಕದನವಿರಾಮ ಉಲ್ಲಂಘಿಸಬೇಡಿ ಎಂದು ಮಾನವಿ ಮಾಡಿದ್ದ ಪಾಕ್, ಮತ್ತೆ ಮತ್ತೆ ಕದನವಿರಾಮ ಉಲ್ಲಂಘಿಸಿದೆ.