ತಮಿಳುನಾಡು, ಅ 25 (Daijiworld News/MSP): ತಮಿಳುನಾಡಿನ ತಿರುಚಿ ಜಿಲ್ಲೆಯ ಮನಪ್ಪರೈ ಬಳಿಯ ನದುಕಟ್ಟುಪಟ್ಟಿಯಲ್ಲಿ ಎಂಬಲ್ಲಿ ಎರಡು ವರ್ಷದ ಮಗುವೊಂದು 25 ಅಡಿಯ ಬೋರ್ ವೆಲ್ ಒಳಗೆ ಬಿದ್ದ ಘಟನೆ ಶುಕ್ರವಾರ ಸಂಜೆ ನಡೆದಿದ್ದು ಆತನನ್ನು ರಕ್ಷಿಸುವ ಪ್ರಯತ್ನಗಳು ಮುಂದುವರಿದಿದೆ.
ಎರಡು ವರ್ಷದ ಮಗು ಸುಜಿತ್ ವಿಲ್ಸನ್ ಕೊಳವೆ ಬಾವಿಗೆ ಬಿದ್ದ ಬಾಲಕ. ಶುಕ್ರವಾರ ಸಂಜೆ 5.30 ರ ಸುಮಾರಿಗೆ ಮನೆ ಬಳಿ ಆಟವಾಡುತ್ತಿದ್ದ ಸುಜಿತ್ ಮನೆಯ ಮುಂಭಾಗದಲ್ಲಿ ಏಳು ವರ್ಷ ಹಳೆಯದಾದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದ ತಕ್ಷಣ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿದ್ದು, ಬಾಲಕನನ್ನು ರಕ್ಷಿಸಲು ಹರಸಾಹಸ ಪಡುತ್ತಿವೆ. ಸುರಂಗ ಕೊರೆದು ಬಾಲಕನ್ನು ತಲುಪಬೇಕು ಎನ್ನುವ ಪ್ರಯತ್ನಕ್ಕೆ 10 ಅಡಿ ಆಳದಲ್ಲಿ ಬಂಡೆ ಎದುರಾಗಿ ಆ ಬಳಿಕ ಕಾರ್ಯ ಸ್ಥಗಿತಗೊಳಿಸಲಾಯಿತು. ಸದ್ಯ ಮೆಡಿಕಲ್ ತಂಡ ಸ್ಥಳದಲ್ಲಿದ್ದು, ಕೊಳವೆ ಬಾವಿಯೊಳಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ.