ದುಬಾಯಿ, ಅ.27(Daijiworld News/SB): ಟಿಪ್ಪು ಜಯಂತಿಯ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕ ಶರತ್ ಬಚ್ಚೇಗೌಡ ಹೇಳಿಕೆಯೊಂದನ್ನು ನೀಡಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಹೊಸಕೋಟೆಯಲ್ಲಿ ನಡೆದ ಉರೂಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನಮ್ಮ ಆಡಳಿತ ಅವಧಿಯಲ್ಲಿ ಟಿಪ್ಪು ಜಯಂತಿಗೆ ನಾವೇ ಮುಂದಾಳುತ್ವ ವಹಿಸಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಯುವಮೋರ್ಚ ಕಾರ್ಯದರ್ಶಿಯಾದ ಶರತ್ ಬಚ್ಚೇಗೌಡರ ಈ ಹೇಳಿಕೆ ಟಿಪ್ಪು ಜಯಂತಿಯನ್ನು ವಿರೋಧಿಸಿಕೊಂಡು ಬಂದಿರುವ ಬಿಜೆಪಿ ಹಾಗೂ ಇದರ ನಾಯಕರಲ್ಲಿ ತೀವೃ ಇರಿಸುಮುರಿಸು ಉಂಟುಮಾಡಿದೆ. ಟಿಪ್ಪು ಜಯಂತಿಯನ್ನು ರದ್ದುಪಡಿಸುವ ಬಗ್ಗೆ ಗಂಭೀರ ಚಿಂತನೆಯಲ್ಲಿರುವ ರಾಜ್ಯಸರ್ಕಾರಕ್ಕೂ ಬಚ್ಚೇಗೌಡರ ವಿವಾದಾತ್ಮಕ ಹೇಳಿಕೆ ಮುಜುಗರವನ್ನುಂಟು ಮಾಡಿದೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಟಿಕೆಟ್ ಅಕಾಂಕ್ಷಿಯಾದ ಶರತ್ ಬಚ್ಚೇಗೌಡ ಈಗಾಗಲೇ ತಮ್ಮ ವೈಯುಕ್ತಿಕ ಪ್ರಚಾರವನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.