ನವದೆಹಲಿ,ಅ 27 (Daijiworld News/MSP): ದೀಪಗಳ ಹಬ್ಬದ ದೀಪಾವಳಿಯ ಸಂಭ್ರಮವನ್ನು ಸೈನಿಕರೊಂದಿಗೆ ಆಚರಿಸಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಜಮ್ಮುವಿನ ರಜೌರಿಗೆ ಆಗಮಿಸಿದ್ದಾರೆ.
ಪಾಕ್ನೊಂದಿಗೆ ಗಡಿ ಹಂಚಿಕೊಂಡಿರುವ ರಜೌರಿ ಬಂದು ಅಲ್ಲಿಂದ ನೇರವಾಗಿ ಸೇನಾ ಬ್ರಿಗೇಡ್ ಪ್ರಧಾನ ಕಚೇರಿಗೆ ತೆರಳಿದ್ದಾರೆ. ಅಲ್ಲಿ ಸೈನಿಕರನ್ನು ನೇರವಾಗಿ ಭೇಟಿಯಾಗಿ ಹಬ್ಬ ಆಚರಿಸಲಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂದರೆ 2014ರಿಂದ ದೀಪಾವಳಿಯನ್ನು ಸೇನಾ ಪಡೆಗಳೊಂದಿಗೆ ಆಚರಿಸುವ ಪರಿಪಾಠ ಬೆಳೆಸಿಕೊಂಡಿರುವ ಮೋದಿ, 2014ರಲ್ಲಿ ಮೊದಲ ಬಾರಿ ಸಿಯಾಚಿನ್ನಲ್ಲಿ ಸೈನಿಕರೊಂದಿಗೆ ಹಬ್ಬ ಆಚರಿಸಿದ್ದರು. 2017 ರಲ್ಲಿ ಗುರೇಜ್ ಸೆಕ್ಟರ್ನಲ್ಲಿ ಸೈನಿಕರೊಂದಿಗೆ ಆಚರಿಸಿಕೊಂಡಿದ್ದರು. ಕಳೆದ ಬಾರಿ 2018 ರಲ್ಲಿ ಉತ್ತರಾಖಂಡದ ಐಟಿಬಿಪಿ ಸೇನಾ ಕ್ಯಾಂಪ್ನಲ್ಲಿ ಹಬ್ಬ ಆಚರಿಸಿದ್ದರು.
ಈ ಬಾರಿ ದೀಪಾವಳಿ ಮತ್ತು ಭಾರತೀಯ ಸೇನೆಯ ಕಾಲಾಳುಪಡೆ ದಿನಾಚರಣೆ ಒಂದೇ ದಿನ ಬಂದಿದೆ.