ನವದೆಹಲಿ, ಅ 28 (Daijiworld News/MSP): ಸೌದಿ ಅರೇಬಿಯಾ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಆಹ್ವಾನದ ಮೇರೆಗೆ ನರೇಂದ್ರ ಮೋದಿ ಗಲ್ಫ್ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ದಿನಗಳ ಕಾಲದ ಪ್ರವಾಸ ಇದಾಗಿದ್ದು, ಆರ್ಥಿಕ ಮತ್ತು ಇಂಧನ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ಈ ಪ್ರವಾಸ ಪ್ರಾಮುಖ್ಯತೆ ಪಡೆದಿದೆ.
ಈ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿರುಪೇ ಕಾರ್ಡ್ ಬಿಡುಗಡೆ ಮಾಡಲಿದ್ದಾರೆ.
ದಲ್ಲದೆ ಪ್ರಧಾನಿ ಸೋಮವಾರ ರಾತ್ರಿ ಪ್ರಧಾನಿ ರಿಯಾದ್ಗೆ ಆಗಮಿಸಲಿದ್ದಾರೆ. ರಿಯಾದ್ ನಲ್ಲಿ ನಡೆಯಲಿರುವ ಫ್ಯೂಚರ್ ಇನ್ವೆಸ್ಟ್ಮೆಂಟ್ ಇನಿಶಿಯೇಟಿವ್ (ಎಫ್ಐಐ) ಫೋರಂನ ಅಧಿವೇಶನಕ್ಕೂ ಹಾಜರಾಗಲಿದ್ದು, ಅಲ್ಲಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಮಾತ್ರವಲ್ಲದೆ ಸೌದಿಯ ಮಿನಿಸ್ಟರ್ಸ್ ಹಾಗೂ ಕೆಲವು ಗಣ್ಯರನ್ನು ಭೇಟಿಯಾಗಲಿದ್ದಾರೆ.
ಮೋದಿಯವರು ಮಂಗಳವಾರ ಎಫ್ಐಐ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಅದೇ ರಾತ್ರಿ ನವದೆಹಲಿಗೆ ತೆರಳಲಿದ್ದಾರೆ.
ಉಭಯ ದೇಶಗಳು ಈ ವರ್ಷದ ಡಿಸೆಂಬರ್ನಲ್ಲಿ ಜಂಟಿಯಾಗಿ ನೌಕಾ ಸಮರಭ್ಯಾಸ ನಡೆಸುವ ನಿರೀಕ್ಷೆಯಿದೆ.