ಮಧ್ಯಪ್ರದೇಶ, ಅ 28 (Daijiworld News/MSP):ದೇಶಾದ್ಯಂತ ದೀಪಾವಳಿಯನ್ನು ಬಹಳ ಆಡಂಬರದಿಂದ ಆಚರಿಸಲಾಗುತ್ತಿದೆ.. ಆದರೆ ದೀಪಾವಳಿಯ ಸಡಗರನ್ನು ವಿಭಿನ್ನ ರೀತಿಯಲ್ಲಿ ಆಚರಿಸಿ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಮತ್ತು ಕ್ಯಾಬಿನೆಟ್ ಸಚಿವ ಜಿತು ಪಟ್ವಾರಿ ಸುದ್ದಿಯಲ್ಲಿದ್ದಾರೆ. ಬಡ ಮಕ್ಕಳೊಂದಿಗೆ ಫೈವ್ ಸ್ಟಾರ್ ಹೋಟೆಲ್ ಗೆ ತೆರಳಿ ಪಾರ್ಟಿ ಮಾಡಿ ಈ ಬಾರಿ ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತಾರೆ.
ಜೀತು ಪಟ್ವಾರಿ ಈ ರೀತಿ ದೀಪಾವಳಿ ಆಚರಿಸಿದ್ದು ಇದೇ ಮೊದಲಲ್ಲ. ಬಡ ಮಕ್ಕಳೊಂದಿಗೆ ದೊಡ್ಡ ಹೋಟೆಲ್ಗಳಿಗೆ ಭೇಟಿ ನೀಡಿ ಪ್ರತಿವರ್ಷ ದೀಪಾವಳಿಯನ್ನು ಆಚರಿಸುತ್ತಾರೆ. ಈ ವರ್ಷವೂ ಅವರು ಇಂದೋರ್ನ ರಾಡಿಸನ್ ಹೋಟೆಲ್ನಲ್ಲಿ ಅನಾಥರು ಮತ್ತು ನಿರ್ಗತಿಕ ಮಕ್ಕಳೊಂದಿಗೆ ದೀಪಾವಳಿಯನ್ನು ಆಚರಿಸಿದರು.
ಜೀತು ಪಟ್ವಾರಿ ಮಕ್ಕಳನ್ನು 5 ಸ್ಟಾರ್ ಹೋಟೆಲ್ಗೆ ಕರೆದೊಯ್ದು ಅವರೊಂದಿಗೆ ಊಟ ಮಾಡಿದ್ದು ಮಾತ್ರವಲ್ಲದೆ ಮಕ್ಕಳೊಂದಿಗೆ ಕಾಲ ಕಳೆದು ಉಡುಗೊರೆಗಳನ್ನು ನೀಡಿದ್ದಾರೆ. ಜೀತು ಅವರ ಪುತ್ರ ಹಾಸ್ಟೆಲ್ನಲ್ಲಿದ್ದಾನೆ. ಮಗ ತಂದೆಗೆ ಕರೆ ಮಾಡಿ ಈ ಬಾರಿ,ಬಡ ಮಕ್ಕಳ ಜೊತೆ ಹೊಟೇಲ್ ನಲ್ಲಿ ದೀಪಾವಳಿ ಆಚರಿಸಲ್ವಾ ಎಂದು ಪ್ರಶ್ನಿಸಿದನಂತೆ. ಖಂಡಿತವಾಗಿ ಆಚರಿಸಲು ಇದೆ ಎಂದು ತಕ್ಷಣ ಮಕ್ಕಳನ್ನು ಹೊಟೇಲ್ ಗೆ ಕರೆತಂದೆ ಎಂದು ಅವ್ರು ಹೇಳಿದ್ದಾರೆ.