ಬಾಗಲಕೋಟೆ, ಅ 30 (DaijiworldNews/SM): ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಡಿದ್ದಾರೆ. ಟಿಪ್ಪು ಹೋರಾಟ ನಿಜವೋ ಸುಳ್ಳೋ? ಇತಿಹಾಸ ಯಾವುದೇ ಕಾರಣಕ್ಕೂ ತಿರುಚಲು ಸಾಧ್ಯವಿಲ್ಲ. ಟಿಪ್ಪುವನ್ನು ಮತಾಂಧ ಎಂದು ಹೇಳುವ ಬಿಜೆಪಿಯವರೇ ದೊಡ್ಡ ಮತಾಂಧರು ಎನ್ನುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಟಿಪ್ಪು ಕುರಿತಾದ ಅಧ್ಯಾಯವನ್ನು ಪಠ್ಯದಿಂದ ಕೈ ಬಿಡುವುದಕ್ಕಾಗಿ ಪಠ್ಯಪುಸ್ತಕ ಸಮಿತಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ವರದಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಟಿಪ್ಪು ಪಠ್ಯ ಕೈಬಿಡುವುದೆಂದರೆ, ಅದು ಇತಿಹಾಸವನ್ನೇ ತಿರುಚುವುದು. ಟಿಪ್ಪುವನ್ನು ಮತಾಂಧರೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಬೇರೆಯಾರದರು ಟಿಪ್ಪುವನ್ನು ಆ ರೀತಿಯಲ್ಲಿ ಕರೆದಿದ್ದಾರೆಯೇ? ಟಿಪ್ಪುವನ್ನು ಮತಾಂಧ ಎಂದು ಕರೆಯುವ ಬಿಜೆಪಿಯವರೇ ಮತಾಂಧರು ಎಂದು ಲೇವಡಿ ಮಾಡಿದ್ದಾರೆ.
ಇನ್ನು ಪಠ್ಯದಿಂದ ಮೈಸೂರು ಹುಲಿ ಟಿಪ್ಪ್ಪು ಸುಲ್ತಾನ್ ಎಂಬ ಅಧ್ಯಾಯವನ್ನು ಕೈಬಿಡಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿಂದೆ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ಆಚರಣೆಯನ್ನೂ ಕೂಡ ಬಿಜೆಪಿ ಸರಕಾರ ರದ್ದುಗೊಳಿಸಿದೆ. ಇದೀಗ ಪಠ್ಯದಿಂದಲೂ ಟಿಪ್ಪುವಿನ ವಿಚಾರಗಳಳನ್ನು ಕೈಬಿಡುವುದಕ್ಕೆ ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.