ಬೆಂಗಳೂರು, ಅ.31(Daijiworld News/SS): ಅಧಿಕಾರ ಶಾಶ್ವತ ಅಲ್ಲ. ದ್ವೇಷದ ರಾಜಕೀಯ ಮಾಡೋದಾದ್ರೆ ಮಾಡಲಿ. ಆದ್ರೆ ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಅಪ್ರೂವಲ್ ಮಾಡಿತ್ತು. ಅದನ್ನು ಕಿತ್ತುಕೊಳ್ಳೋದು ನ್ಯಾಯವಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪನವರ ಪಾಲಿಟಿಕ್ಸ್ ತಗೊಂಡು ನಾನೇನ್ ಮಾಡಲಿ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ನಮ್ಮ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರ. ಅದನ್ನು ಬದಲಿಸೋ ಮೂಲಕ ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಅನ್ನೋದು ನನ್ನ ಲೈಫ್ ಟೈಮ್ ಗುರಿ. ಹೀಗಾಗಿ ಕನಕಪುರ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಕೊಡಬೇಕು. ಒಂದು ವೇಳೆ ಸರ್ಕಾರ ಕೊಡದಿದ್ರೆ ನಾನು ಸುಮ್ಮನೆ ಕೂರಲ್ಲ ಎಂದು ಹೇಳಿದರು.
ಯಡಿಯೂರಪ್ಪನವರು ಅವರು ಈ ಬಗ್ಗೆ ನನ್ನ ಜೊತೆ ಮಾತಾಡಲಿ. ನಾನು ಕೂಡ ಅವ್ರಿಗೆ ಪತ್ರ ಬರೆಯುತ್ತೇನೆ. ಕನಕಪುರಕ್ಕೆ ಕಾಲೇಜು ನೀಡೋ ವಿಚಾರದಿಂದ ಅವರು ಹಿಂದೆ ಹೋಗೋದು ಬೇಡ. ಕನಕಪುರಕ್ಕೂ ಕಾಲೇಜು ಕೊಡಲಿ. ಚಿಕ್ಕಬಳ್ಳಾಪುರಕ್ಕೂ ಕೊಡಲಿ ಎಂದು ಹೇಳಿದರು.