ಗದಗ, ನ 1 (Daijiworld News/MB): ಗರ್ಭಿಣಿ ಮಹಿಳಾ ಪೇದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗದ ಪೊಲೀಸ್ ವಸತಿಗೃಹದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಸೀಮಾ ಶಿವನಗೌಡ (24) ಇಂದು ಕನ್ನಡ ರಾಜ್ಯೋತ್ಸವವಾದ ಕಾರಣ ಬೇಗನೆ ಕೆಲಸಕ್ಕೆ ಹೋಗಬೇಕೆಂದು ಗಂಡನನ್ನು ಬೇಗ ಎಬ್ಬಿಸಿ ವಾಕಿಂಗ್ ಕಳುಹಿಸಿ ತಮ್ಮ ಪೊಲೀಸ್ ವಸತಿಗೃಹದಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2018ರಲ್ಲಿ ಪ್ರೇಮವಿವಾಹವಾಗಿದ್ದ ಇವರು 2016ರ ಬ್ಯಾಚಿನ ಮಹಿಳಾ ಪೊಲೀಸ್ ಪೇದೆಯಾಗಿದ್ದಾರೆ. ಪತಿ ಕೋರ್ಟಿನಲ್ಲಿ ಕೆಲಸಮಾಡುತ್ತಿದ್ದು, ವಿವಾಹಕ್ಕೆ ಪತ್ನಿಯ ಮನೆಯವರ ಒಪ್ಪಿಗೆ ಇರಲಿಲ್ಲ. ಪತಿಯ ಮನೆಯಲ್ಲಿ ಒಪ್ಪಿಗೆ ಇತ್ತು ಎಂದು ತಿಳಿದುಬಂದಿದೆ. ಮೂರು ತಿಂಗಳ ಗರ್ಭಿಣಿಯಾದ ಇವರ ಆತ್ಮಹತ್ಯೆಗೆ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಈ ಪ್ರಕರಣ ನಗರದ ಬೆಟಗೇರಿ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.