ನವದೆಹಲಿ, ನ.02(Daijiworld News/SS): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ 2 ದಿನಗಳ ಕಾಲ ಥಾಯ್ಲೆಂಡ್ ಪ್ರವಾಸ ಮಾಡಲಿದ್ದಾರೆ.
ಈ ಪ್ರವಾಸದ ಸಂದರ್ಭದಲ್ಲಿ ಅವರು ಅಸಿಯಾನ್-ಇಂಡಿಯಾ, ಈಸ್ಟ್ ಏಷ್ಯಾ, ಆರ್ಸಿಇಪಿ ಶೃಂಗಗಳಲ್ಲೂ ಪಾಲ್ಗೊಳ್ಳುವವರಿದ್ದಾರೆ. ಥಾಯ್ಲೆಂಡ್ ಪ್ರಧಾನಿ ಪ್ರಯೂತ್ ಛಾನ್-ಒ-ಚಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಬ್ಯಾಂಕಾಂಕ್'ಗೂ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಪೌರಾತ್ಯ ಕಾರ್ಯದರ್ಶಿ ವಿಜಯ್ ಠಾಕೂರ್ ಸಿಂಗ್ ಹೇಳಿಕೆ ಪ್ರಕಾರ, ಪ್ರಧಾನಿ ಮೋದಿ 16ನೇ ಅಸಿಯಾನ್-ಇಂಡಿಯಾ ಶೃಂಗ, 14ನೇ ಈಸ್ಟ್ ಏಷ್ಯಾ ಶೃಂಗ, ಮೂರನೇ ರೀಜನಲ್ ಕಾಂಪ್ರಹೆನ್ಸಿವ್ ಎಕನಾಮಿಕ್ ಪಾರ್ಟನರ್ಷಿಪ್(ಆರ್ಸಿಇಪಿ) ಶೃಂಗ ಮತ್ತು ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನೂ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿರುವ ಆರ್'ಸಿಇಪಿ ಒಪ್ಪಂದದ ಬಿಕ್ಕಟ್ಟಿನ ಅಂಶಗಳ ಕುರಿತು ಮಾತುಕತೆಯೂ ಇದೇ ವೇಳೆ ನಡೆಯಲಿದೆ.