ನವದೆಹಲಿ, ನ 2 (Daijiworld News/MSP): ವಾಟ್ಸಾಪ್ ನಲ್ಲಿ ನಿಮ್ಮ ಮಾಹಿತಿ ಸೋರಿಕೆಯಾಗುವ ಭಯವಿದ್ದರೆ ನೀವು ವಾಟ್ಸಾಪ್ ಸಂಸ್ಥೆ ಪರಿಚಯಿಸಿರುವ ಹೊಸ ಫೀಚರ್ ಬಳಸಿಕೊಂಡು ನಿಮ್ಮ ಮಾಹಿತಿ ಮತ್ತಷ್ಟು ಗೌಪ್ಯವಾಗಿಡಬಹುದು.
ಈ ಹಿಂದೆ ಐಒಎಸ್ ಬಳಕೆದಾರರಿಗೆ ಲಭ್ಯವಿದ್ದ ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್, ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ಈಗ ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯವಾಗುತ್ತಿದೆ. ಆ್ಯಂಡ್ರಾಯ್ಡ್ ಬೇಟಾ ವರ್ಷನ್ ಗಳಲ್ಲೂ ಹೊಸತನದ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ಸೇರಿಕೊಂಡಿದ್ದು ಇದು ಬಳಕೆದಾರನ್ನು ಆಕರ್ಷಿಸಿದೆ. ವಾಟ್ಸಾಪ್ ಸಂಸ್ಥೆ ತನ್ನ ಬಳಕೆದಾರರಿಗೆ ಹೆಚ್ಚು ಭದ್ರತೆಯನ್ನು ನೀಡಲು ಫಿಂಗರ್ ಪ್ರಿಂಟ್ ಲಾಕ್ ಅನ್ನು ಪರಿಚಯಿಸಿದೆ.
ಈ ಹಿಂದೆ ವಾಟ್ಸಾಪ್ ಬಳಕೆದಾರರು "ಇತರ ಲಾಕರ್ ಅ್ಯಪ್" ಗಳ ಮೂಲಕ ವಾಟ್ಸಪ್ ಲಾಕ್ ಮಾಡುತ್ತಿದ್ದರು. ಇದು ಹೆಚ್ಚು ಸೆಕ್ಯೂರ್ ಆಗಿರಲಿಲ್ಲ. ಇದೀಗ ತಮ್ಮ ಮಾಹಿತಿ ಸೋರಿಕೆಯನ್ನು ತಡೆಗಟ್ಟಲು ಫಿಂಗರ್ ಪ್ರಿಂಟ್ ಲಾಕ್ ಬಳಕೆದಾರರು ಬಳಸಿಕೊಳ್ಳಬಹುದು .
ವಾಟ್ಸಾಪ್ ಫಿಂಗರ್ ಪ್ರಿಂಟ್ ಲಾಕ್ ಹೀಗೆ ಸಕ್ರಿಯಗೊಳಿಸಿ:
* ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ. ಆ ಬಳಿಕ ವಾಟ್ಸಪ್ ಅಪ್ಲಿಕೇಶನ್ ಹೋಗಿ ಅಲ್ಲಿ ಕಾಣುತ್ತಿರುವ ಮೂರು ಚುಕ್ಕೆಯನ್ನು ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ.
* ನಂತರ ಅಕೌಂಟ್ ‘ಗೆ ಹೋಗಿ, ನಂತರ ಪ್ರೈವೆಸಿಗೆ ಆಯ್ಕೆ ಹೋದಾಗ ಕೆಳಗಡೆ ಫಿಂಗರ್ ಪ್ರಿಂಟ್ ಲಾಕ್ ಕಾಣುತ್ತದೆ. ಅದನ್ನು ಟರ್ನ್ ಆನ್ ಮಾಡಿರಿ.
* ಎನೆಬಲ್ ಮಾಡಿದ ಕೂಡಲೇ ಅಲ್ಲಿ ಆಟೋ ಮ್ಯಾಟಿಕ್ ಲಾಕ್ ಎಷ್ಟು ಸಮಯದ ಒಳಗಡೆ ಆಗಬೇಕು ಎನ್ನುವ ಆಯ್ಕೆಯನ್ನು ನಿಮ್ಮ ಮುಂದೆ ತೋರಿಸುತ್ತದೆ.1 ನಿಮಿಷ ,30 ನಿಮಿಷ ಮತ್ತು ತಕ್ಷಣವೇ ಲಾಕ್ ಆಗುವಂತಹ ಆಯ್ಕೆಗಳಿರುತ್ತದೆ.