ತೆಲಂಗಾಣ, ನ 2 (Daijiworld News/MB): ಮದುವೆ ಎಂದರೆ ಅಲ್ಲಿ ಸಂಭ್ರಮ, ಸಡಗರ ಇರುತ್ತದೆ. ಆದರೆ ಕೇವಲ ಒಂದು ಕ್ಷುಲ್ಲಕ ಕಾರಣಕ್ಕೆ ಮದುವೆ ಮನೆಯಲ್ಲೆ ವಧು ಮತ್ತು ವರನ ಸಂಬಂಧಿಕರು ಹೊಡೆದಾಡಿಕೊಂಡು ಮದುವೆ ಮನೆ ರಣಾಂಗಣವಾದ ಘಟನೆ ತೆಲಂಗಾಣದ ಸುರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಜಿಲ್ಲೆಯ ಕೋಡಾಡ ಮಂಡಲ್ ನ ನಿವಾಸಿ ಅಜಯ್ ಹಾಗೂ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಇಂದ್ರಜಾ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ಅಕ್ಟೋಬರ್ 29ರಂದು ನಡೆದ ಮದುವೆ ಸಮಾರಂಭದಲ್ಲಿ ಮದುವೆ ದಿಬ್ಬಣವನ್ನು ಗ್ರಾಮದ ಆಚೆಗೆ ತೆಗೆದುಕೊಂಡು ಹೋಗುವ ವಿಚಾರದಲ್ಲಿ ವಧು, ವರನ ಕುಟುಂಬದ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಕೈ-ಕೈ ಮೀಲಾಯಿಸುವ ಮದುವೆ ಮನೆಯಲ್ಲಿದ್ದ ಕುರ್ಚಿಗಳಲ್ಲಿ ಹೊಡೆದುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ತಿಳಿಸಿದೆ.
ಕೋಡಾಡ್ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಶಿವರಾಮ್ ರೆಡ್ಡಿ ಈ ಕುರಿತಂತೆ ಎಎನ್ ಐಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಈ ವರದಿ ಪ್ರಕಾರ
ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಲ್ ಇನ್ಸ್ ಪೆಕ್ಟರ್ ರೆಡ್ಡಿ ,ಮಾಹಿತಿ ತಿಳಿದಾಗಲೇ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಮದುವೆ ಮನೆಯಲ್ಲಿ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೂರು ದಾಖಲಿಸುವಂತೆ ಅವರಿಗೆ ತಿಳಿಸಿಲಾಗಿತ್ತು. ಆದರೆ ಶುಕ್ರವಾರ ಪೊಲೀಸ್ ಠಾಣೆಗೆ ಆಗಮಿಸಿದ ಕುಟುಂಬದ ಸದಸ್ಯರು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಿನ್ನೆ ನಡೆದ ಘಟನೆ ಬಗ್ಗೆ ನಾವೇ ಮಾತಾನಾಡಿ ಬಗೆಹರಿಸಿ ಕೊಂಡಿದ್ದೇವೆಂದು ತಿಳಿಸಿದ್ದು, ಹೀಗಾಗಿ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.