ಲಖನೌ, ನ.02(Daijiworld News/SS): ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿಗೆ ದಿನಗಣನೆ ಹಾಗೂ ದಸರಾ ಹಬ್ಬ ನಡೆಯುತ್ತಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ತೀರ್ಪು ಕೆಲ ದಿನಗಳಲ್ಲಿ ಪ್ರಕಟವಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಯಾವುದೇ ಊಹಾಪೋಹಕ್ಕೆ ಕಿವಿಗೊಡದೆ ಶಾಂತ ಚಿತ್ತರಾಗಿರುವಂತೆ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಸಂಘಟನೆಗಳು ಕರೆ ನೀಡಿವೆ.
ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಒಪ್ಪಬೇಕು ಮತ್ತು ಶಾಂತಿ- ಸೌಹಾರ್ದಕ್ಕೆ ಧಕ್ಕೆಯಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿದೆ.
ಅಯೋಧ್ಯೆ ವಿವಾದಲ್ಲಿ ತೀರ್ಪು ಏನೇ ಇದ್ದರೂ ಅದನ್ನು ಗೌರವಿಸೋಣ. ಸಮುದಾಯದವರು ಅತ್ಯಂತ ಶಾಂತತೆಯಿಂದ ಇದ್ದು, ಸೌಹಾರ್ದ ಕಾಪಾಡಬೇಕು ಎಂದು ಉತ್ತರ ಪ್ರದೇಶದ ಅನೇಕ ಮಸೀದಿಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಮೌಲ್ವಿಗಳು ಹೇಳಿದ್ದಾರೆ.