ನವ ದೆಹಲಿ,ನ 3 (Daijiworld News/MSP): ಕೇಂದ್ರ ಸರ್ಕಾರ ದೇಶದ ಹೊಸ ಭೂಪಟ ಬಿಡುಗಡೆ ಮಾಡಿದೆ.
ನೂತನ ಕೇಂದ್ರಾಡಳಿತ ಪ್ರದೇಶಗಳ ಆದ ಜಮ್ಮು-ಕಾಶ್ಮೀರ ಹಾಗೂ ಲಡಾಕ್ ನ ಹೊಸ ರಾಜಕೀಯ ನಕ್ಷೆಯನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ್ದು ಮಹತ್ವದ ಅಂಶ ಎಂಬಂತೆ ಈ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಹೆಸರಿಡಲಾಗಿದ್ದ ಪ್ರದೇಶಗಳನ್ನು ಸಂಪೂರ್ಣವಾಗಿ ಭಾರತದ ಗಡಿಯೊಳಗೆ ಗುರುತಿಸಲಾಗಿದೆ.
ಕೇಂದ್ರಾಡಳಿತ ಲಡಾಕ್ ಭೂಪ್ರದೇಶಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸೇರಿಸಲಾಗಿದೆ. ಪಿಓಕೆಯಲ್ಲಿರುವ ಮುಜಾಫರಬಾದ್ ಮತ್ತು ಮೀರ್ಪೂರ್ ಹೊಸ ಭೂಪಟದಲ್ಲಿ ಚಿತ್ರಸಲಾಗಿದೆ ವ್ಯಾಪ್ತಿಗೆ ಕಾರ್ಗಿಲ್ ಮತ್ತು ಲೇಸ್ ಜಿಲ್ಲೆಗಳನ್ನು ಸೇರ್ಪಡೆಗೊಳಿಸಲಾಗಿದೆ.
ಗೃಹಸಚಿವಾಲಯ ಬಿಡುಗಡೆಗೊಳಿಸಿದ ರಾಜಕೀಯ ನಕ್ಷೆಯಲ್ಲಿ 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳನ್ನು ಗುರುತಿಸಲಾಗಿದೆ ಶುಕ್ರವಾರ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ಜಗದೀಶ್ಚಂದ್ರ ಮೂರ್ಮು ಹಾಗೂ ಲಡಾಕ್ ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾಕೃಷ್ಣ ಮತ್ತು ಪ್ರಮಾಣ ವಚನ ಸ್ವೀಕರಿಸಿದ್ದರು. ಇವರಿಬ್ಬರೂ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಕೇಂದ್ರ ಸರ್ಕಾರ ಭಾರತದ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ.