ಚಿಕ್ಕಬಳ್ಳಾಪುರ, ನ 03 (DaijiworldNews/SM): ಸಿದ್ದರಾಮಯ್ಯ ಸರಕಾರದ ವಿರುದ್ಧ ವೃತ ಆರೋಪಗಳನ್ನು ಹೊರಿಸುತ್ತಿದ್ದಾರೆ. ಕೇವಲ ವಿಪಕ್ಷ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮನಬಂದಂತೆ ಆರೋಪಗಳನ್ನು ನಡೆಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪರಮೇಶ್ವರ್ ಅವರಿಗೆ ಸಿಗಬೇಕಿದ್ದ ಸ್ಥಾನ ಸಿದ್ದರಾಮಯ್ಯಗೆ ಸಿಕ್ಕಿದೆ. ತಾನು ವಿಪಕ್ಷ ನಾಯಕ ಎನ್ನುವುದನ್ನು ತೋರ್ಪಡಿಸಲು ಅವರು ಈ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಬಾಯಿ ತೆರೆದರೆ ಸಾಕು ಸುಳ್ಳನ್ನೇ ಹೇಳುವುದು. ಮೊಯ್ಲಿಯವರನ್ನು ಮೀರಿಸುವಂತೆ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.