ದಾವಣಗೆರೆ,ನ 03 (DaijiworldNews/SM): ಕೇಂದ್ರ ಸರಕಾರದ ವಿರುದ್ಧ ಮಾಜಿ ಸಚಿವ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದು, "ದೇಶವನ್ನು ಮಾರುವಂಥ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜಿಎಸ್ ಟಿ, ನೋಟ್ ಬ್ಯಾನ್ ಸೇರಿದಂತೆ ಹಲವು ಯೋಜನೆಗಳಿಂದ ದೇಶದಲ್ಲಿ ಕಷ್ಟದ ಪರಿಸ್ಥಿತಿ ಬಂದಿದೆ.
ಆರ್ ಸಿಇಪಿಗೆ ಸಹಿ ಹಾಕಿದರೆ ಸ್ವಾಭಿಮಾನಿ ಬದುಕು ಕಷ್ಟವಾಗುತ್ತದೆ. ಅದರಲ್ಲೂ ಹೈನುಗಾರಿಕೆ ಮಾಡುವ ನಮ್ಮ ರೈತರ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು, ಈ ಒಪ್ಪಂದದ ಸಾಧಕ ಬಾಧಕಗಳನ್ನು ತಿಳಿಯಬೇಕೆಂದು ಖಾದರ್ ಆಗ್ರಹಿಸಿದ್ದಾರೆ.
ಇನ್ನು ಟಿಪ್ಪು ಪಠ್ಯ ತೆಗೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮುಂದೆ ಬಿಜೆಪಿ ಸರಕಾರ ಗಾಂಧಿ, ಅಂಬೇಡ್ಕರ್ ರನ್ನು ಸಹ ಪಠ್ಯದಿಂದ ತೆಗೆಯಬಹುದು ಎಂದಿದ್ದಾರೆ.