ಪುಣೆ, ನ 04 ( Daijiworld/MB) : ಆತನ ಕಿಸೆಯಲ್ಲಿತ್ತು ಕೇವಲ ಮೂರು ರೂಪಾಯಿ. ಆದರೆ ಬಸ್ಸು ನಿಲ್ದಾಣದಲ್ಲಿ ಸಿಕ್ಕಿದ್ದು ನಲ್ವತ್ತು ಸಾವಿರ ರೂಪಾಯಿ. ಆದರೂ ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಅವರಿಂದ ಪಡೆದಿದ್ದು ಕೇವಲ ಏಳು ರೂಪಾಯಿ.
ಪುಣೆಯ ದಾನಜಿ ಜಗ್ದೆಲೆ ತನಗೆ ಬಸ್ಸು ನಿಲ್ದಾಣದಲ್ಲಿ ಸಿಕ್ಕಿದ ನಲ್ವತ್ತು ಸಾವಿರ ಹಣವನ್ನು ಹಣ ಕಳೆದುಕೊಂಡ ವ್ಯಕ್ತಿಗೆ ಹಿಂತಿರುಗಿ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಹಣ ಎಂದರೆ ಹೆಣನೂ ಬಾಯಿ ಬಿಡುವಾಗ ತನ್ನ ಕೈಯಲ್ಲಿ ಮೂರು ರೂಪಾಯಿ ಮಾತ್ರ ಇದ್ದರೂ ಆ ಹಣ ಸೇರಬೇಕಾದ ವ್ಯಕ್ತಿಗೆ ತಲುಪಿಸಿದ ಇವರು ಅದರ ಬದಲಾಗಿ ಪಡೆದದ್ದು ಬರೀ ಏಳು ರೂಪಾಯಿ ಮಾತ್ರ.
ಈ ಕುರಿತು ಮಾತಾನಾಡಿದ ದಾನಜಿ ‘ನನಗೆ ದೀಪಾವಳಿಗೆಂದು ದಹಿವಾಡಿಗೆ ಹೋಗಲು ಇತ್ತು ಅಲ್ಲಿಂದ ಹಿಂದಿರುಗುವಾಗ ಬಸ್ಸು ನಿಲ್ದಾಣದಲ್ಲಿ ಹಣದ ಕಟ್ಟು ಸಿಕ್ಕಿತು. ಅಲ್ಲಿದವರಲ್ಲಿ ವಿಚಾರಿಸುತ್ತಿರುವಾಗ ಹಣದ ವಾರಸುದಾರರು ಸಿಕ್ಕರು. ಅವರ ಬಳಿ ಮಾತಾನಾಡಿದಾಗ ನನ್ನ ಹೆಂಡತಿಯ ಸರ್ಜರಿಗೆಂದು ಇರಿಸಿದ ಹಣವಿದು ಎಂದರು ಮತ್ತು ನನ್ನ ಪ್ರಾಮಾಣಿಕತೆಗೆ ಒಂದು ಸಾವಿರ ನೀಡಲು ಬಂದಾಗ ನನ್ನ ಬಳಿ 3 ರೂಪಾಯಿ ಮಾತ್ರ ಇತ್ತು. ಬಸ್ಸಿನಲ್ಲಿ ಹೋಗಲು 10 ರೂಪಾಯಿ ಆಗುತ್ತದೆ. ಅದಕ್ಕೆ ಆತನ ಕೈಯಿಂದ 7 ರೂಪಾಯಿ ಪಡೆದೆ’ ಎಂದು ಅವರು ಹೇಳಿದರು.
ಈ ಮೊದಲು ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಕೋರೆಗಾವ್ ನ ತೆಹೆಸಿಲ್ಲಿನ ರಾಹುಲ್ ಬಾರ್ಗೆ ಎಂಬವರು ದಾನಜಿಗೆ ಐದು ಲಕ್ಷ ನೀಡಲು ಮುಂದಾಗಿದ್ದರು. ಆದರೆ ಆ ಸಂದರ್ಭದಲ್ಲೂ ದಾನಜಿ ಹಣ ಪಡೆದಿಲ್ಲ.
ಬೇರೆಯವರ ಹಣ ಪಡೆಯುವುದು ನನಗೆ ತೃಪ್ತಿ ನೀಡುವುದಿಲ್ಲ. ನಾನೂ ಎಲ್ಲರಲ್ಲೂ ಪ್ರಾಮಾಣಿಕವಾಗಿ ಬಾಳಲು ಸಂದೇಶ ನೀಡುತ್ತೇನೆಂದು ಹೇಳಿದ ಅವರು ಹಣ ಹಿಂತುರಿಗಿಸಿ ಜನರಿಗೆ ಪ್ರಾಮಾಣಿಕತೆಯ ಪಾಠ ಕಲಿಸಿದ್ದಾರೆ.