ಬೆಂಗಳೂರು, ನ.04(Daijiworld News/SS): ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯ ಕಾರಣ ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯ ಅವರೇ ಕಾರಣ. 17 ಜನ ರಾಜೀನಾಮ ಕೊಟ್ಟು ಈಗ ಅನರ್ಹತೆಯನ್ನು ಎದುರಿಸುತ್ತಿರುವುದಕ್ಕೆ ನೀವೇ ಹೊಣೆ ಎಂದು ಸಿದ್ದರಾಮಯ್ಯ ಕಡೆ ಬೊಟ್ಟು ಮಾಡಿ ತೋರಿಸಿದ್ದಾರೆ. ನಾವು ಇಷ್ಟು ದಿನ ನಿಮ್ಮ ಮಾತನ್ನು ಸಂಯಮದಿಂದ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್'ಗೆ ಸೋಲು ಶತಸಿದ್ಧ. ಕಾಂಗ್ರೆಸ್ ಮತ್ತೆ ಸೋಲುವುದು ಖಚಿತ. ಮತ್ತೆ ನೀವು ವಿರೋಧಪಕ್ಷದಲ್ಲೇ ಕೂರೋದು ಸತ್ಯ. ಆಡಿಯೋದಿಂದ ಡ್ಯಾಮೇಜ್ ಏನೂ ಆಗಲ್ಲ. ಈಗಾಗಲೇ ಕಾಂಗ್ರೆಸ್ ನೆಲ ಕಚ್ಚಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಇರುವವರೆಗೂ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿರುವುದಕ್ಕೂ ನಮಗೂ ಸಂಬಂಧ ಇಲ್ಲ. ರಾಜೀನಾಮೆ ನೀಡಿದ 17 ಜನ ಶಾಸಕರ ಜೊತೆ ಮಾತನಾಡಿ. ನೀವೇ ವಾಪಸ್ಸು ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದಾರೆ.
ರಮೇಶ್ ಕುಮಾರ್, ಸಿದ್ದರಾಮಯ್ಯ ಜೊತೆ ಕೈ ಜೋಡಿಸಿ ಅವರನ್ನು ಅನರ್ಹರನ್ನು ಮಾಡಿರುವುದಕ್ಕೆ ಯಾರು ಕಾರಣ..? ನೀವು ಮಾಡಿದ ಕುತಂತ್ರ ತಾನೆ..? ಸುಪ್ರೀಂಕೋರ್ಟ್'ನಲ್ಲಿ ಗೊಂದಲವಿದೆ. ಜನರಲ್ಲಿ ಗೊಂದಲ ಉಂಟು ಮಾಡುವುದು ಸರಿಯಲ್ಲ. ಅತಿವೃಷ್ಟಿ ಬಗ್ಗೆ ಅಂಕಿ ಅಂಶ ಕೂಡ ಸರಿಯಲ್ಲ ಅಂತೀರಾ..? ನೀವೇ ಮುಖ್ಯ ಕಾರ್ಯದರ್ಶಿಗಳನ್ನು ಕೇಳಿ, ಒಬ್ಬ ಮಾಜಿ ಸಿಎಂ, ವಿಪಕ್ಷ ನಾಯಕನಾಗಿ ಜವಾಬ್ದಾರಿಯುತವಾಗಿ ಮಾತನಾಡಿ ಎಂದು ಕಿಡಿ ಕಾರಿದ್ದಾರೆ.