ಆಗ್ರಾ, ನ.04(Daijiworld News/SS): ಶಾಹಿದ್ ನಗರ ಪ್ರದೇಶದ ವಿವಾಹ ಮನೆಯೊಂದರ ವಿದ್ಯುದ್ದೀಕರಿಸಿದ ಕಬ್ಬಿಣದ ಗೇಟ್ ಅನ್ನು ಸ್ಪರ್ಶಿಸಿ ಗರ್ಭಿಣಿ ಮಹಿಳೆ ಮತ್ತು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಸುಮನ್ ಯಾದವ್ (26) ಮತ್ತು ಮೃತ ಬಾಲಕನ್ನು ಮನೀಶ್ (14) ಎಂದು ಗುರುತಿಸಲಾಗಿದೆ.
ಕಬ್ಬಿಣದ ಗೇಟಿನಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಇದನ್ನು ಸ್ಪರ್ಶಿಸಿದ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಮೃತ ಮಹಿಳೆಯ ಪತಿ ಖಾಸಗಿ ಬಸ್ನಲ್ಲಿದ್ದ ಕಂಡಕ್ಟರ್ ಆಗಿದ್ದು, ಸುಮನ್ ಆರು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಗೇಟಿನಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಬಗ್ಗೆ ಯಾರಿಗೂ ತಿಳಿದಿಲ್ಲವಾದ್ದರಿಂದ, ಯಾವುದೇ ಮುನ್ನೆಚ್ಚರಿಕೆ ವಹಿಸಿರಲಿಲ್ಲ.
ಈ ಘಟನೆಗೆ ಸಂಬಂಧಿಸಿ ಹಿರಿಯ ಎಸ್ಐ ಅಶೋಕ್ ಶರ್ಮಾ, ತೋಟದ ಮಾಲೀಕ ರಾಮ್ ಚಂದ್ರ ಪರಾಶರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.