ಬೆಂಗಳೂರು, ಅ.12 (DaijiworldNews/AA): ನಂದಿನಿ ಮಿಲ್ಕ್ ಪೌಡರ್ ಕಲಬೆರಕೆ ಆಗಿದೆ ಎಂಬ ಆರೋಪಕ್ಕೆ ತೆರೆ ಬಿದ್ದಿದ್ದು, ಇದು ಸಂಪೂರ್ಣವಾಗಿ ಸುರಕ್ಷಿತ ಎಂದು ಆಹಾರ ಸುರಕ್ಷತಾ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ನಂದಿನಿ ಮಿಲ್ಕ್ ಪೌಡರ್ನಲ್ಲಿ ಕಲಬೆರಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನಲೆಯಲ್ಲಿ ಮಿಲ್ಕ್ ಪೌಡರ್ ಗುಣಮಟ್ಟ ಪರೀಕ್ಷಿಸುವಂತೆ ಆರೋಗ್ಯ ಸಚಿವರು ಸೂಚನೆ ನೀಡಿದ್ದರು. ಬಳಿಕ ಸೆಪ್ಟೆಂಬರ್ 26 ರಂದು ಕೆಎಂಎಫ್ ಡೈರಿಗಳಿಂದ ಮಿಲ್ಕ್ ಪೌಡರ್ ಮಾದರಿ ಸಂಗ್ರಹ ಮಾಡಿ ಎಫ್ಎಸ್ಎಸ್ಎಐ ಪರೀಕ್ಷೆಗೆ ಕಳಿಸಲಾಗಿತ್ತು.
ಇದೀಗ ಲ್ಯಾಬ್ ರಿಪೋರ್ಟ್ ಬಂದಿದೆ. ಪರೀಕ್ಷಿಸಲಾದ ಮಿಲ್ಕ್ ಪೌಡರ್ ಮಾದರಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಅಧಿಕೃತ ವರದಿ ಬಂದಿದೆ. ಈ ಹಿನ್ನೆಲೆ ಮಿಲ್ಕ್ ಪೌಡರ್ ಕುರಿತ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ದೊರೆತಿದೆ.