ಚೆನ್ನೈ, ಅ.12 (DaijiworldNews/AA): ಮುಖ್ಯಮಂತ್ರಿ ವಿಜಯ್ ಅಂತಿಮವಾಗಿ ರಾಜಕೀಯವಾಗಿ ಬಿಜೆಪಿಯೊಂದಿಗೆ ಮಾತ್ರ ನಿಲ್ಲಲಿದ್ದಾರೆ. ಅವರು 'ಬಿಜೆಪಿಯ ಗುಲಾಮ' ಎಂದು ಹಿರಿಯ ಡಿಎಂಕೆ ನಾಯಕ ಟಿ.ಕೆ.ಎಸ್. ಇಳಂಗೋವನ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಜಯ್ ಬಿಜೆಪಿಯ ಉತ್ಪನ್ನ. ಹೀಗಾಗಿ, ಅವರು ಬಿಜೆಪಿಯ ಮುಂದೆ ಯಾವ ರೀತಿಯ ಬೇಡಿಕೆಯನ್ನು ಇಟ್ಟಿದ್ದಾರೆ ಮತ್ತು ನಮಗೆ ಯಾವ ರೀತಿಯ ಫಲಿತಾಂಶ ಸಿಗಲಿದೆ ಎಂಬುದು ತಿಳಿದಿಲ್ಲ. ಕಾದು ನೋಡೋಣ" ಎಂದು ಹೇಳಿದರು.
ಚೆನ್ನೈಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಮುಂದೆ ಕೊಯಮತ್ತೂರು ಮತ್ತು ಮಧುರೈ ಮೆಟ್ರೋ ರೈಲು ಯೋಜನೆಗಳ ಕುರಿತು ಸಿಎಂ ವಿಜಯ್ ಮಂಡಿಸಿದ ಪ್ರಸ್ತಾವನೆಗಳ ವಿಚಾರವಾಗಿ ಮಾತನಾಡಿದ ಅವರು, "ನಾವು ಈ ಬಗ್ಗೆ ಕೇಳಿದಾಗ ಅವರು ನಿರಾಕರಿಸಿದ್ದರು. ಈಗ ಅವರು ಏನು ಮಾಡುತ್ತಾರೆಂದು ನೋಡೋಣ. ಅವರು ಒಪ್ಪಿಕೊಂಡರೆ, ಅದು ತಮಿಳುನಾಡಿಗೆ ಒಳ್ಳೆಯದು. ತಮ್ಮ ವಿರುದ್ಧ ಹೋರಾಡುವ ಯಾರನ್ನೇ ಆಗಲಿ ಪೀಡಿಸಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ" ಎಂದು ಆರೋಪಿಸಿದರು.