ನವದೆಹಲಿ ನ 05 (Daijiworld News/MB) : ವೈರಲ್ ಆಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರ ವಿಡಿಯೋ ಆಡಿಯೋವನ್ನು ಸುಪ್ರೀಂಕೋರ್ಟ್ ಸಾಕ್ಷಿಯಾಗಿ ಪರಿಗಣಿಸಿದೆ.
ಸಿಎಂ ಯಡಿಯೂರಪ್ಪರ ಆಡಿಯೋವನ್ನು ಪರಿಗಣಿಗಣಿಸಿ ಮತ್ತೆ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಸೋಮವಾರ ಕಾಂಗ್ರೆಸ್ ಸುಪ್ರೀಂಕೋರ್ಟ್ ಗೆ ಮನವಿ ಮಾಡಿತ್ತು.
ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ಸೋರಿಕೆಯಾಗಿರುವ ಬಿಎಸ್ ಯಡಿಯೂರಪ್ಪ ಅವರ ಆಡಿಯೊ ಇರುವ ಸಿಡಿಯನ್ನು ಸ್ವೀಕರಿಸಿರುವುದಾಗಿ ಹೇಳಿದೆ.
ಈ ಹಿನ್ನಲೆಯಲ್ಲಿ ಮಾತಾನಾಡಿದ,ಕಾಂಗ್ರೆಸ್ ನಾಯಕ ಪ್ರಕಾಶ್ ರಾಥೋಡ್ 'ನಮ್ಮ ಕಾನೂನಾತ್ಮಕ ಹೋರಾಟಕ್ಕೆ ಗೆಲುವು ಲಭಿಸಿದೆ. ಸಿಎಂ ಬಿಎಸ್ ಯಡಿಯೂರಪ್ಪ ಮಾತಾನಾಡಿರುವ ವಿಡಿಯೋ ಆಡಿಯೋವನ್ನು ತೀರ್ಪು ನೀಡುವ ಸಂದರ್ಭ ಸಾಕ್ಷಿಯಾಗಿ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರೆ, ಸಿಎಂ ಯಡಿಯೂರಪ್ಪ ಪರ ಸುಂದರಂ ವಾದಿಸಿದರು. ಜೆಡಿಎಸ್ ಪರ ವಕೀಲ ಧವನ್ ತೀರ್ಪಿನ ಸಂದರ್ಭ ಆಡಿಯೊ ಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದರು. ಅನರ್ಹ ಶಾಸಕರ ಪರ ವಕೀಲರು ಅನರ್ಹ ಶಾಸಕರ ಪ್ರಕರಣಕ್ಕೂ ಯಡಿಯೂರಪ್ಪರವರ ಆಡಿಯೊ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದಾರೆ.