ಜೈಪುರ, ನ 5 (Daijiworld News/MSP): 19 ವರ್ಷದ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಮೂವರು ಕಿರಾತಕರು ೫ ಗಂಟೆಗಳ ಕಾಲ ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ಶುಕ್ರವಾರ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದ್ದು, ಈ ಕುರಿತು ಅದೇ ದಿನ ಪ್ರಕರಣ ದಾಖಲಾಗಿದ್ದರೂ ಈವರೆಗೆ ಯಾರನ್ನೂ ಬಂಧಿಸಿಲ್ಲ.
ದ್ವಿತೀಯ ವರ್ಷದ ಕಾಲೇಜು ವಿದ್ಯಾರ್ಥಿನಿಯಾಗಿರುವ ಈಕೆ ಅಕ್ಟೋಬರ್ 1 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಗಂಟೆ ಸುಮಾರಿಗೆ ಕೋಚಿಂಗ್ ಸೆಂಟರ್ ಗೆ ನಡೆದುಕೊಂಡು ಹೋಗುತ್ತಿದ್ದಾಗ ಸಂದರ್ಭ ಮೂವರು ಕಿರಾತಕರು ಬಲವಂತವಾಗಿ ಕಾರಿನೊಳಕ್ಕೆ ತಳ್ಳಿ ಕಿಡ್ನಾಪ್ ಮಾಡಿದ್ದರು. ಆ ಬಳಿಕ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ ಚಲಿಸುತ್ತಿದ್ದ ಕಾರಿನೊಳಗೆ ಐದು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ವರದಿ ಹೇಳಿದೆ.
ಕಿರಾತಕರು ಬಳಿಕ ವಿದ್ಯಾರ್ಥಿನಿಗೆ ಅತ್ಯಾಚಾರದ ವಿಚಾರ ಹೊರಗೆಡವಿದರೆ, ಹತ್ಯೆ ಮಾಡುವ ಬೆದರಿಕೆಯೊಡ್ಡಿದ್ದರು. ಆ ಬಳಿಕ ಸುಮಾರು 10 ಗಂಟೆ ರಾತ್ರಿಗೆ ಲಾಲ್ ಸೋಟ್ ಪ್ರದೇಶದಲ್ಲಿ ತಂದು ಬಿಟ್ಟು ಹೋಗಿರುವುದಾಗಿ ದೂರಿನಲ್ಲಿ ವಿವರಿಸಿದೆ.
ಮುಂಜಾನೆ ಘಟನೆ ನಡೆದಿರುವುದರಿಂದ ಸಹಾಯ ಯಾಚಿಸಲು ಯಾರು ಇರಲಿಲ್ಲ. ಸಾಮೂಹಿಕ ಅತ್ಯಾಚಾರ ಎಸಗಿದವರಲ್ಲಿ ಇಬ್ಬರು ನೆರೆಯ ಗ್ರಾಮದವರು ಎಂದು ತಿಳಿದುಬಂದಿದೆ. ಮೂರನೇಯ ಆರೋಪಿಯ ಹೆಸರು ಮಾತ್ರ ತನಗೆ ತಿಳಿದಿರುವುದಾಗಿ ಯುವತಿ ತಿಳಿಸಿರುವುದಾಗಿ ಲಾಲ್ ಸೋಟ್ ಪೊಲೀಸ್ ಅಧಿಕಾರಿ ಮನ್ರಾಜ್ ಮೀನಾ ತಿಳಿಸಿದ್ದಾರೆ.
ಘಟನೆ ನಡೆದ ದಿನದಂದೇ ದೂರು ದಾಖಲಿಸಿದರೂ ಆರೋಪಿಗಳ ಬಂಧನವಾಗದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ಮೀನಾ ತಿಳಿಸಿದ್ದಾರೆ.