ಬೆಂಗಳೂರು, ನ.06(Daijiworld News/SS): ಬೇನಾಮಿ ಆಸ್ತಿ, ಅಕ್ರಮ ಹಣ ಸಂಗ್ರಹ ಸೇರಿದಂತೆ ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷಿ ಸಂಗ್ರಹಿಸುವಲ್ಲಿ ಕೇಂದ್ರ ತನಿಖಾ ತಂಡ ಸಿಬಿಐ ವಿಫಲವಾಗಿದ್ದು, ಸದ್ಯಕ್ಕೆ ಡಿಕೆ ಶಿವಕುಮಾರ್'ಗೆ ಮುಕ್ತಿ ಸಿಕ್ಕಂತಾಗಿದೆ.
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಮತ್ತೆ ಇ.ಡಿ ಸಮನ್ಸ್ ದೆಹಲಿ ಕೋರ್ಟಿನಿಂದ ಜಾಮೀನು ಪಡೆದು ಹೊರಬಂದ ಡಿಕೆ ಶಿವಕುಮಾರ್ ವಿರುದ್ಧ ಸಾಕ್ಷ್ಯ ಸಂಗ್ರಹಣೆಗೆ ಸಿಬಿಐ ಮುಂದಾಗಿತ್ತು. ತನಿಖಾ ಸಂಸ್ಥೆಗಳು 2017ರ ಐಟಿ ದಾಳಿ ಪ್ರಕರಣ ತನಿಖೆಯನ್ನು ಮುಂದಿಟ್ಟುಕೊಂಡು ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿ, ತನಿಖೆ ಮುಂದುವರೆಸಿ ವಿಚಾರಣೆ ಮಾಡಿದ್ದು, ಕಾನೂನು ಹೋರಾಟ ಮುಂದುವರೆದಿದೆ.
ಇದಕ್ಕೆ ಪೂರಕವಾಗಿ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಬ್ಯಾಂಕ್ ಖಾತೆಗಳ ನಡುವಿನ ಹಣ ವರ್ಗಾವಣೆ, ಡಿಕೆಶಿ ಕುಟುಂಬಸ್ಥರ ಹೆಸರಿನಲ್ಲಿರುವ ಆಸ್ತಿ ವಿವರ, ಸೌರಶಕ್ತಿ ಸ್ಥಾವರ ನಿರ್ಮಾಣ ಗುತ್ತಿಗೆ ಟೆಂಡರ್ ಹೀಗೆ ವಿವಿಧ ರೀತಿಯಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯ ನಡೆದಿತ್ತು. ಆದರೆ ಸೂಕ್ತ ಸಾಕ್ಷಿ ಸಂಗ್ರಹಿಸುವಲ್ಲಿ ಕೇಂದ್ರ ತನಿಖಾ ತಂಡ ಸಿಬಿಐ ವಿಫಲವಾಗಿದೆ ಎನ್ನಲಾಗಿದೆ.
ಸದ್ಯ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿಗೆ ರಿಟರ್ನ್ ಆಗಿ ದೇಗುಲ ದರ್ಶನದಲ್ಲಿ ನಿರತರಾಗಿದ್ದಾರೆ.