ಬೆಂಗಳೂರು, ನ 6 (Daijiworld News/MB): ಸರಕಾರಕ್ಕೆ ತೆರಿಗೆ ವಂಚನೆ ಮಾಡಿದ ಮತ್ತು ಸೂಕ್ತ ದಾಖಲೆ ಸಲ್ಲಿಸದಿರುವ ನಗರದ 11 ಉದ್ಯಮಿಗಳ ಮನೆಯ ಮೇಲೆ ಐಟಿ ದಾಳಿ ನಡೆಸಿದ್ದು, ಕಾರ್ಯಚರಣೆ ಮುಂದುವರಿದಿದೆ.
ಇಂದು ಬೆಳಿಗ್ಗೆ 7 ಗಂಟೆಗೆ ನಗರದ 11 ಉದ್ಯಮಿಗಳ ಮನೆಗೆ ದಾಳಿ ನಡೆಸಿದ್ದು, ನಗರದ ವರ್ತೂರು ಎಲೆಕ್ಟ್ರಾನಿಕ್ ಸಿಟಿಗಳಲ್ಲಿರುವ ಕೆಲವು ಕಂಪನಿಗಳ ಮೇಲೂ ದಾಳಿ ನಡೆಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಪೈಕಿ ಕೆಲವು ಉದ್ಯಮಿಗಳ ಉದ್ಯಮ ಚೆನ್ನೈನಲ್ಲಿದ್ದು ಏಕಕಾಲಕ್ಕೆ ಚೆನ್ನೈನಲ್ಲಿಯೂ ಐಟಿ ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆದಿದೆ.