ನವದೆಹಲಿ, ನ.07(Daijiworld News/SS): ಪಂಜಾಬ್ನ ಗುರುದಾಸ್ಪುರದ ಡೇರಾ ಬಾಬಾ ನಾನಕ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿದ್ದಾರೆಂಬ ಮಾಹಿತಿ ಆತಂಕ ಸೃಷ್ಟಿಸಿದೆ.
ಡೇರಾ ಬಾಬಾ ನಾನಕ್ಗೆ ನ. 9ಕ್ಕೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ, ಕರ್ತಾರ್ಪುರ್ ಕಾರಿಡಾರ್ಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆಗೆ ಆದೇಶಿಸಲಾಗಿದೆ. ಮಾತ್ರವಲ್ಲ, ಉಗ್ರರು ಅವಿತಿರುವ ಕುರಿತು ವರದಿ ಸಲ್ಲಿಸುವಂತೆ ಗಡಿ ಭದ್ರತಾ ಪಡೆಗೆ ಸರ್ಕಾರ ಸೂಚಿಸಿದೆ.
ಪಾಕಿಸ್ತಾನದ ಗಡಿ ಭಾಗದ ಮುರಿಡ್ಕೆ, ಶಕುರ್ಗಢ ಮತ್ತು ನರೋವಾಲ್ಗಳಲ್ಲಿ ಕೆಲವು ಭಯೋತ್ಪಾದಕ ಶಿಬಿರಗಳು ಪತ್ತೆಯಾಗಿದ್ದು, ಗಡಿಯಾಚೆಯಿಂದ ಪಂಜಾಬ್ ಪ್ರವೇಶಿಸಿರುವ ಕೆಲವು ಭಯೋತ್ಪಾದಕರು ಡೇರಾ ಬಾಬಾ ನಾನಕ್ ಪ್ರದೇಶದಲ್ಲಿ ಇದ್ದಾರೆಂದು ಗುಪ್ತಚರ ವರದಿ ತಿಳಿಸಿದೆ.