ಬೆಂಗಳೂರು , ನ 7 (Daijiworld News/MB):ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಹೀಗಾಗಿ ಚಂಡಮಾರುತ ಏಳುವ ಸಾಧ್ಯತೆ ಇದ್ದು, ಈ ಪರಿಣಾಮದಿಂದಾಗಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತಕ್ಕೆ ಬುಲ್ ಬುಲ್ ಎಂದು ಹೆಸರಿಸಲಾಗಿದೆ.
ಕ್ಯಾರ್, ಮಹಾ ಚಂಡಮಾರುತದ ನಂತರ ಈಗ ಬುಲ್ ಬುಲ್ ಚಂಡಮಾರುತದ ಆತಂಕ ಜನರನ್ನು ಕಾಡಿದೆ.
ಕರ್ನಾಟಕಕ್ಕೆ ಚಂಡಮಾರುತದ ನೇರ ಪರಿಣಾಮ ಇಲ್ಲದಿದ್ದರೂ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಭಾರತದ ಪೂರ್ವ ಕರಾವಳಿಯಲ್ಲಿ ಈ ಚಂಡಮಾರುತದ ಪರಿಣಾಮ ಹೆಚ್ಚಾಗಿದ್ದು, ಒರಿಸ್ಸಾ ರಾಜ್ಯದ 14 ಜಿಲ್ಲೆಗಳಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದೆ.