ಚೆನ್ನೈ, ನ 7 (Daijiworld News/MB): ಪೋಷಕರಿಗೆ ದೂರು ನೀಡಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಯೋರ್ವ ವಾಡರ್ನ್ ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಚೆನ್ನೈ ನ ಹಾಸ್ಟೆಲ್ ವೊಂದರಲ್ಲಿ ನಡೆದಿದೆ.
ವಿದ್ಯಾರ್ಥಿ ಶಾಲೆಗೆ ಸರಿಯಾಗಿ ಹಾಜರಾಗುತ್ತಿಲ್ಲದ ಕಾರಣ ಈ ವಿಚಾರವನ್ನು ವಾರ್ಡನ್ ಆತನ ಪೋಷಕರ ಗಮನಕ್ಕೆ ತಂದಿದ್ದರು. ಈ ವಿಚಾರದಲ್ಲಿ ಕೋಪಕೊಂಡ ವಿದ್ಯಾರ್ಥಿ ವಾಡರ್ನ್ ನನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ವಾಡರ್ನ್ ಜಿ. ವೆಂಕಟರಮಣ (45) ಅವರಿಗೆ ಕುತ್ತಿಗೆ ಮತ್ತು ಹೊಟ್ಟೆಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.
ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದು, ವಿದ್ಯಾರ್ಥಿ ಕಾಲೇಜಿಗೆ ಸರಿಯಾಗಿ ಹೋಗುತ್ತಿರಲಿಲ್ಲ ಮತ್ತು ಹಾಸ್ಟೆಲ್ ಗೂ 4 ದಿನಗಳಿಂದ ಬಂದಿರಲಿಲ್ಲ. ಆದ್ದರಿಂದ ವಾಡರ್ನ್ ಆತನ ಪೋಷಕರಿಗೆ ದೂರು ನೀಡಿದ್ದರು. ಪೋಷಕರು ಮಗನನ್ನ ತರಾಟೆಗೆತ್ತಿಗೊಂಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ವಾಡರ್ನ್ ಬಳಿ ಜಗಳಕ್ಕಿಳಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.