ಛತ್ತೀಸ್ ಗಢ, ನ.07(Daijiworld News/SS): ಛತ್ತೀಸ್'ಗಢ ರಾಜ್ಯದ ಬಿಜಾಪುರ್ ಜಿಲ್ಲೆಯಲ್ಲಿ ನಡೆದ ಎನ್'ಕೌಂಟರ್'ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧ ಹುತಾತ್ಮರಾಗಿದ್ದಾರೆ.
ನಸುಕಿನ ಜಾವ 4 ಗಂಟೆ ಹೊತ್ತಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ ಕೋಬ್ರಾ ಘಟಕದ ಸಿಬ್ಬಂದಿ ಪಮೇಡ್ ಪ್ರದೇಶದಲ್ಲಿ ಶೋಧಕಾರ್ಯ ನಡೆಸುತ್ತಿದ್ದಾಗ ನಕ್ಸಲರು ಏಕಾಏಕಿ ದಾಳಿ ಮಾಡಲು ಆರಂಭಿಸಿದರು. ಇದಕ್ಕೆ ಪ್ರತ್ಯುತ್ತರ ನೀಡುವ ವೇಳೆ ಯೋಧ ಹುತಾತ್ಮರಾಗಿದ್ದಾರೆ. ಎನ್'ಕೌಂಟರ್'ನಲ್ಲಿ ಕೆಲವು ಮಾವೋವಾದಿಗಳು ಸಹ ಹತ್ಯೆಯಾಗಿರಬಹುದು ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.
ಭದ್ರತಾ ಸಿಬ್ಬಂದಿ ಸುತ್ತುವರಿದ ತಕ್ಷಣ ನಕ್ಸಲೀಯರು ಸ್ಥಳ ಬಿಟ್ಟು ಪರಾರಿಯಾಗಿದ್ದಾರೆ. ದಂತೇವಾಡ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಎನ್ ಕೌಂಟರ್'ನಲ್ಲಿ ಇಬ್ಬರು ನಕ್ಸಲೀಯರು ಹತ್ಯೆಗೊಂಡಿದ್ದರು ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿದ್ದರು. ಇದೀಗ ಮತ್ತೆ ನಕ್ಸಲರು ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದಾರೆ.