ಮುಂಬೈ, ನ 7 (Daijiworld News/MB): ಚಿತ್ರದಲ್ಲಿ ಇರುವ ಈ ಒಡೆದು ಹೋದ ಕಿಟಕಿ ಯಾವುದೋ ಡಕೋಟ ಬಸ್ಸಿನದ್ದಲ್ಲ, ಇದು ವಿಮಾನದ್ದು. ಒಡೆದು ಹೋದ ಈ ವಿಮಾನದ ಕಿಟಕಿಯ ಫೋಟೋವನ್ನು ಹರಿಹರಣ್ ಶಂಕರ್ ಎಂಬವರು ಟ್ವೀಟ್ ಮಾಡಿದ್ದಾರೆ.
ಮುಂಬೈ- ದೆಹಲಿ ವಿಮಾನದಲ್ಲಿ ಕ್ರಾಕ್ ಆದ ಗ್ಲಾಸ್ ನ ಕಿಟಕಿ ಮೇಲೆ ಸೆಲೋ ಟೇಪ್ ತಗಲಿಸಲಾಗಿದ್ದು, ಇದನ್ನು ಪೋಸ್ಟ್ ಮಾಡಿದ ಹರಿಹರಣ್ ಶಂಕರ್ 'ನ. 5ರಂದು ಮುಂಬೈನಿಂದ- ದೆಹಲಿ ಹೊರಟ ವಿಮಾನದಲ್ಲಿ ಕ್ರಾಕ್ ಆದ ಗ್ಲಾಸ್ ನ ಕಿಟಕಿ ಮೇಲೆ ಸೆಲೋ ಟೇಪ್ ತಗಲಿಸಲಾಗಿದ್ದು, ಇದು ಕಾಳಜಿಯಿಂದ ಹಾಕಲಾಗಿದೆಯೇ?ಯಾರಾದರೂ ಕೇಳುವವರಿದ್ದೀರಾ? ಪ್ರಯಾಣಿಕರು ಜಾಗರೂಕರಾಗಿರಲು ಸೂಚನೆಯೇ?’ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಪೈಸ್ ಜೆಟ್ 'ರಕ್ಷಣೆಗೆ ನಾವು ಆದ್ಯತೆ ನೀಡುತ್ತೇವೆ. ಆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕ್ರಾಕ್ ಕಿಟಕಿ ಗ್ಲಾಸ್ ನ ಒಳ ಭಾಗದಲ್ಲಿ ಆಗಿತ್ತು. ಅದನ್ನು ಆ ದಿನವೇ ಬದಲಾಯಿಸಲಾಗಿದೆ’ ಎಂದು ತಿಳಿಸಿದ್ದಾರೆ.
ವಿಮಾನ 10,000 ಅಡಿ ಎತ್ತರದಲ್ಲಿ ಹಾರಾಟ ನಡೆಸುವುರಿಂದ ವಿಮಾನದ ಒಳಗಡೆ ಆಕ್ಸಿಜನ್ ಪೂರೈಕೆ ಬಹಳ ಕಡಿಮೆ ಇರುತ್ತದೆ. ಹಾಗಾಗಿ ವಿಮಾನದ ಕಿಟಕಿ ಒಡೆಯುವುದು ಅತ್ಯಂತ ಅಪಾಯಕಾರಿ ಆಗಿದೆ. ಕಿಟಕಿ ಒಡೆದಲ್ಲಿ ಹೊರಗಿನ ಗಾಳಿ ಒಳಬಂದು ಒತ್ತಡ ಹೆಚ್ಚಾಗಿ ಜನರನ್ನು ಹೊರಗೆಳೆಯುತ್ತದೆ ಮತ್ತು ವಿಮಾನ ಕೆಳಗುರುಳುತ್ತದೆ. ಪ್ರಯಾಣಿಕರಿಗೆ ಉಸಿರಾಡಲು ತೊಂದರೆ ಆಗುತ್ತದೆ.
ಈ ವಿಮಾನ ಆ ದಿನ 28 ನಿಮಿಷ ತಡವಾಗಿ ಲ್ಯಾಂಡ್ ಆಗಿತ್ತು ಎಂದು ವರದಿಯಾಗಿದೆ.