ಮಹಾರಾಷ್ಟ್ರ, ನ 7 (Daijiworld News/MB): ಮಹಾರಾಷ್ಟ್ರ ಚುನಾವಣೆ ಬಳಿಕ ಅಧಿಕಾರದ ವಿಚಾರದಲ್ಲಿ ಆಗುತ್ತಿರುವ ಗೊಂದಲದ ಬೆನ್ನಲ್ಲೇ ಶಿವಸೇನೆಯ ಶಾಸಕರು ಮುಂಬೈನ ಹೋಟೆಲ್ ಒಂದಕ್ಕೆ ಶಿಫ್ಟ್ ಆಗುವುದರಲ್ಲಿ ತಯಾರಿಯಲ್ಲಿದ್ದಾರೆ. ಹೀಗಾಗಿ ಅಲ್ಲಿಯೂ ರೆಸಾರ್ಟ್ ರಾಜಕೀಯ ಆರಂಭವಾಗುವುದರಲ್ಲಿದೆ.
ಪಕ್ಷದ ಮುಖ್ಯಸ್ಥ ಉದಯ್ ಟಾಕ್ರೆಯನ್ನು ಭೇಟಿಯಾದ ನಂತರ ಶಿವಸೇನೆಯ ಶಾಸಕರು ಮುಂಬೈಯ ಬಾಂದ್ರಾ, ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಪಂಚತಾರಾ ಹೋಟೆಲ್ ಗೆ ಒಂದಕ್ಕೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಶಿಫ್ಟ್ ಆದ ಬಲಿಕ ಲ್ಯಾಂಡ್ ಲೈನ್ ಮಾತ್ರ ಒದಗಿಸಲಾಗುವುದು ಎಂದು ವರದಿಯಾಗಿದೆ.
ಆದರೆ ಈ ಕುರಿತು ಪ್ತರಿಕ್ರಯಿಸಿದ ಶಿವ ಸೇನೆ ನಾಯಕ ಸಂಜಯ್ ರಾವತ್ , ‘ನಾವು ಶಾಸಕರನ್ನು ಎಲ್ಲಿಗೂ ವರ್ಗಾವಣೆ ಮಾಡುವುದಿಲ್ಲ. ನಾವು ಯಾರಿಗೂ ಹೆದರಿಲ್ಲ. ಕರ್ನಾಟಕ ಗೋವದಲ್ಲಿ ಏನಾಗಿದೆ ಎಂದು ನಮಗೆ ತಿಳಿದಿದೆ. ಆ ರೀತಿ ಇಲ್ಲಿ ಆಗಲೂ ನಾವು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆ ಕಳೆದು 2 ವಾರ ಆದರೂ ಸರಕಾರ ರಚನೆ ವಿಚಾರದಲ್ಲಿ ಶಿವಸೇನೆ ಮತ್ತು ಬಿಜೆಪಿ ಒಮ್ಮತಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಸ್ಥಾನದ ಜೊತೆಗೆ 50-50 ಮಾದರಿಯಲ್ಲಿ ಸರಕಾರ ರಚನೆ ಆಗಬೇಕು ಎಂಬ ಶಿವಸೇನೆ ಬೇಡಿಕೆಗೆ ಒಪ್ಪದ ಬಿಜೆಪಿ ಎರಡನೇ ಬಾರಿಯೂ ದೇವೆಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳುತ್ತಿದೆ.