ಬೆಂಗಳೂರು, ನ.08(Daijiworld News/SS): ಉಪಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ವರ್ಧಿಸುತ್ತೇವೆ. ಅನರ್ಹ ಶಾಸಕರ ಪರವಾಗಿ ತೀರ್ಪು ಬಂದರೆ ಉಪಚುನಾವಣೆ ನಡೆಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಯಡಿಯೂರಪ್ಪ ಜತೆಗೆ ಸಂಬಂಧ ಬೆಳೆಸಿಕೊಳ್ಳಬೇಕಾ...? ಜಗದೀಶ್ ಶೆಟ್ಟರ್ ಅದೇನೋ ಮರು ಮದುವೆ, ಬೇಳೆ ಕಾಳು ಎಂದಿದ್ದಾರೆ. 60 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇಂತವರಿಂದ ನಾನೇನೂ ಕಲಿಯಬೇಕಿಲ್ಲ. ಹೀಗೆಲ್ಲ ಮಾತಾಡಲು ನಾಚಿಕೆ ಆಗೋದಿಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಬಾಯಿಗೆ ಪಿಸ್ತೂಲ್ ಇಟ್ಟು ಜನರನ್ನು ಹೆದರಿಸುತ್ತಿದ್ದ ಇನ್ಸ್'ಪೆಕ್ಟರ್ ವಿರುದ್ಧ ಧರಣಿ ಕೂತಿದ್ದಕ್ಕೆ ಮಾಧ್ಯಮಗಳು ಏನೇನೋ ಸುದ್ದಿ ಬಿತ್ತರಿಸಿದವು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಿಡಿಮಿಡಿಗೊಂಡಿದ್ದಾರೆ.