ಹಾಸನ, ನ.08(Daijiworld News/SS): ಕಾಂಗ್ರೆಸ್ ನಾಯಕರು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ನಡೆದಿದೆ ಎನ್ನುತ್ತಿದ್ದಾರೆ. ಆದರೆ ಆ ರೀತಿ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ಎದುರಾದರೆ ಅದನ್ನು ಎದುರಿಸುವ ಶಕ್ತಿ ಜೆಡಿಎಸ್ಗೆ ಇಲ್ಲ. ಹೀಗಾಗಿ ನಾವು ಸದ್ಯ ಚುನಾವಣೆ ಬೇಡ ಎನ್ನುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ನಡೆದಿದೆ ಎನ್ನುತ್ತಿದ್ದಾರೆ. ಆದರೆ ಆ ರೀತಿ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಸಹವಾಸ ಬೇಡ ಅಂತ ಕಾಂಗ್ರೆಸ್ ನಾಯಕರು ಹೇಳಿದ ಮೇಲೆ ನಾವೇನು ಮಾಡೋದು. ಹೀಗಾಗಿ ದೇವೇಗೌಡರು ಬಿಜೆಪಿ ಉಳಿದ ಅವಧಿಯಲ್ಲಿ ಅಧಿಕಾರ ನಡೆಸಲಿ ಎಂದು ಸುಮ್ಮನೆ ಇದ್ದಾರೆ. ದೇವೇಗೌಡರನ್ನು ಸೋಲಿಸಲು ಯಾರು ಒಳ ಒಪ್ಪಂದ ಮಾಡಿಕೊಂಡರು ಎಂಬುದು ಗೊತ್ತಿದೆ. ಮುಂದೆ ಅದನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.
ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಸರ್ಕಾರ ಇದ್ದಾಗ ಕೂಡ ಬಿಜೆಪಿ ನಾಯಕರೊಬ್ಬರು ಕುಮಾರಸ್ವಾಮಿ ಅವರೇ 5 ವರ್ಷ ಸಿಎಂ ಆಗಿರಲಿ ಎಂದು ಹೇಳಿದ್ದರು. ನಂತರ ನಡೆದ ಘಟನೆ ಎಲ್ಲರಿಗೂ ಗೊತ್ತಿದೆ. 5 ವರ್ಷ ಸಿಎಂ ಆಗಿರಲಿ ಎಂದು ಹೇಳಿದ ನಾಯಕರ ಹೆಸರನ್ನು ನಾನು ಹೇಳುವುದಿಲ್ಲ ಎಂದು ಹೇಳಿದರು.