ಪುದುಚೇರಿ, ನ 8 (Daijiworld News/MB): ದೇವಾಲಯದ ಈ ಭಿಕ್ಷೆ ಬೇಡುತ್ತಿದ್ದ ಅಜ್ಜಿ ಅಸ್ವಸ್ಥಳಾದಾಗ ಸಹಾಯಕ್ಕೆಂದು ಹೋದ ಪೊಲೀಸರು ಆಕೆಯ ಬಳಿ ಇದ್ದ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ ಠೇವಣಿ ಕಂಡು ಬೆಚ್ಚಿಬಿದ್ದಿದ್ದಾರೆ.
ಭಿಕ್ಷೆ ಬೇಡುತ್ತಿದ್ದ ಅಜ್ಜಿಯ ಬಳಿ 12 ಸಾವಿರ ರೂಪಾಯಿ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ 2 ಲಕ್ಷ ರೂಪಾಯಿ ಠೇವಣಿ, ಕ್ರೆಡಿಟ್ ಕಾರ್ಡ್, ಆಧಾರ್ ಕಾರ್ಡ್ ಇರುವುದನ್ನು ಪುದುಚೇರಿಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
70ವರ್ಷದ ಪಾರ್ವತಮ್ ಎಂಬ ಈ ಅಜ್ಜಿಯ ಗಂಡ 40 ವರ್ಷದ ಹಿಂದೆ ತೀರಿಕೊಂಡಿದ್ದು ಆ ಬಳಿಕ ಅಜ್ಜಿ ಹಾದಿ ಬೀದಿ ತಿರುಗಿ ಭಿಕ್ಷೆ ಬೇಡಲು ಆರಂಭಿಸಿದ್ದರು.
ಅವರ ಬಳಿ ಇರುವ ಹಣ್ಣ ಭಿಕ್ಷೆ ಬೇಡಿ ಸಂಗ್ರಹವಾಗಿರುವುದು ಎಂದು ಅಜ್ಜಿ ತಿಳಿಸಿದ್ದಾರೆ.
'ಈ ಅಜ್ಜಿ ಸುಮಾರು 8 ವರ್ಷಗಳಿಂದ ದೇವಸ್ಥಾನದಲ್ಲೇ ಇದ್ದಾರೆ. ಯಾರಾದರೂ ಕೊಟ್ಟ ಆಹಾರವನ್ನು ಸೇವಿಸಿ ಬದುಕುತ್ತಿದ್ದಾರೆ' ಎಂದು ದೇವಸ್ಥಾನದ ಬಳಿ ಇರುವ ಅಂಗಡಿಯ ನತಿಯಾ ತಿಳಿಸಿದ್ದಾರೆ.
'ನ.7 ರ ಗುರುವಾರದಂದು ಅನಾರೋಗ್ಯಗೊಂಡ ಅಜ್ಜಿ ಹಾದಿಯಲ್ಲಿ ಹೋಗುವವರಲ್ಲಿ ಸಹಾಯ ಯಾಚಿಸುತ್ತಿದ್ದರು. ಆಕೆ ತಮಿಳು ನಾಡಿನ ಕಲ್ಲಿಕುರಿಚಿ ಗ್ರಾಮದ ನಿವಾಸಿಯಾಗಿದ್ದು, ಈಗ ಆಕೆಯ ಸಂಬಂಧಿಕರಿಗೆ ಒಪ್ಪಿಸಲಾಗಿದೆ' ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾರನ್ ತಿಳಿಸಿದ್ದಾರೆ.