ಬೆಂಗಳೂರು, ನ 8 (Daijiworld News/MB): ರಾಜ್ಯಾದ್ಯಂತ ವೈದ್ಯರು ಒಪಿಡಿ ಬಂದ್ ಮಾಡಿ ಮುಷ್ಕರ ನಡೆಸಿದ ಹಿನ್ನಲೆಯಲ್ಲಿ ವೈದ್ಯರ ಮೇಲೆ ಹಲ್ಲೆ ಆರೋಪ ಹೊತ್ತಿರುವ ಅಶ್ವಿನಿ ಗೌಡ ಸೇರಿದಂತೆ 13 ಜನ ಕರವೇ ಕಾರ್ಯಕರ್ತರು ಇಂದು ವಿವಿ ಪುರಂ ಪೊಲೀಸರಿಗೆ ಶರಣಾಗಿದ್ದಾರೆ.
ವೈದ್ಯರ ಮೇಲೆ ಹಲ್ಲೆ ಆರೋಪ ಹೊತ್ತ ನಮ್ಮ ಸಂಘಟನೆಯ ಕಾಯಕರ್ತರು ಪೋಲಿಸರ ಮುಂದೆ ಶರಣಾಗಲು ನಿರ್ಧಾರ ಮಾಡಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.
ಅಶ್ವಿನಿ ಗೌಡ ಸೇರಿದಂತೆ 13 ಮಂದಿ ಕರವೇ ಕಾರ್ಯಕರ್ತರನ್ನು ಸೌಂತ್ ಎಂಡ್ ಡಿಸಿಪಿ ಕಚೇರಿ ಮುಂಭಾಗ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ಹಲ್ಲೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ನಂತರ ವಶಕ್ಕೆ ಪಡೆದ ಕರವೇ ಕಾರ್ಯಕರ್ತರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.