ನವದೆಹಲಿ, ನ.08(Daijiworld News/SS): ಪ್ರಧಾನಿ ಮತ್ತು ಅವರ ಸಹೋದ್ಯೋಗಿಗಳು 2017ರಿಂದ ಅಪನಗದೀಕರಣದ ಬಗೆಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ರಾಷ್ಟ್ರವು ಅದನ್ನು ಮರೆಯುತ್ತದೆ ಎಂಬ ಆಶಯ ಅವರಿದ್ದಿದೆ. ಆದರೆ ದುರದೃಷ್ಟವಶಾತ್ ಕಾಂಗ್ರೆಸ್ ರಾಷ್ಟ್ರದ ಜನತೆ ಅವರನ್ನು ಕ್ಷಮಿಸುವುದಿಲ್ಲ. ನಮಗೂ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾಗುತ್ತದೆ. ಬಿಜೆಪಿಗಿಂತ ಭಿನ್ನವಾಗಿ ನಾವು ಸೇವೆ ಸಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಬಿಜೆಪಿಯ "ಕೆಟ್ಟ ಕಲ್ಪನೆಯ ಆಡಳಿತ ಮಾದರಿ" ಗೆ ಅಪನಗದೀಕರಣವು ಅತ್ಯಂತ ಸೂಕ್ತವಾದ ಒಂದು ರೂಪಕವಾಗಿದೆ. ದೇಶದಲ್ಲಿ 120 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಮತ್ತು ಭಾರತದ ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಕಂಟಕವಾದ "ಅಪನಗದೀಕರಣ" ಮೋದಿ ಸರ್ಕಾರ "ತುಘಲಕಿ ಪ್ರಮಾದ" ಆಗಿದ್ದು, ದೇಶ ಅದನ್ನೆಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಕೆಲ ವರುಷಗಳ ಹಿಂದೆ ಪ್ರಧಾನಿ ಮೋದಿ ಅವರು 500 ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ನಿಷೇಧಿಸಿ "ಅಪನಗದೀಕರಣ" ಆದೇಶ ಹೊರಡಿಸಿದರು. ಕಪ್ಪು ಹಣವನ್ನು ಬಯಲಿಗೆ ತರುವುದಕ್ಕಾಗಿ, ನಕಲಿ ಕರೆನ್ಸಿಯನ್ನು ತೊಡೆದು ಹಾಕುವುದಕ್ಕಾಗಿ, ಭಯೋತ್ಪಾದನೆ ಮತ್ತು ನಕ್ಸಲಿಸಂ ಅನ್ನು ಕಿತ್ತೊಗೆಯುವುದಕ್ಕಾಗಿ ಈ ಉಪಕ್ರಮ ಎಂದು ಅವರು ಭರವಸೆ ಇತ್ತರು. ಆದರೆ ಮೂರು ವರ್ಷಗಳ ನಂತರ, ಪ್ರಧಾನಿ ಮೋದಿ ಈ ಎಲ್ಲ ಅಂಶಗಳಲ್ಲಿ ಅದ್ಭುತವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಮೋದಿ ಸರ್ಕಾರ ತನ್ನ ವೈಫಲ್ಯತೆಯನ್ನು ಮುಚ್ಚಿಟ್ಟುಕೊಳ್ಲಲು, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ರಾಷ್ಟ್ರದ ಜನತೆ ಅದನ್ನು ಮರೆಯುವುದಿಲ್ಲ. ಅವರನ್ನು ಕ್ಷಮಿಸುವುದಿಲ್ಲ ಎಂದು ದೂರಿದ್ದಾರೆ.