ನವದೆಹಲಿ, ನ 09 (Daijiworld News/MSP): ದೇಶ ಬಹುಕಾಲದಿಂದ ಕಾಯುತ್ತಿರುವ, ಶತಮಾನಗಳ ವಿವಾದ, ರಾಜಕೀಯ ಮತ್ತು ಧಾರ್ಮಿಕವಾಗಿ ಬಹುಸೂಕ್ಷ್ಮವಾಗಿರುವ ಅಯೋಧ್ಯ ತೀರ್ಪು ಹೊರಬಿದ್ದಿದೆ. ಸುಪ್ರಿಂ ಪಂಚಪೀಠ ಸರ್ವಾನುಮತದ ತೀರ್ಪು ಪ್ರಕಟಣೆ ಸುಪ್ರೀಂ ಕೋರ್ಟ್ ನಲ್ಲಿ ಆರಂಭವಾಗಿದೆ.
ಪಂಚಪೀಠ ಹೇಳಿದ್ದೇನು?
* ಶಿಯಾಗೆ ಭೂಮಿ ಮೇಲೆ ಯಾವುದೇ ಹಕ್ಕಿಲ್ಲ
* ನಿರ್ಮೋಹಿ ಅಖಾಡದ ಅರ್ಜಿ ವಜಾ
* ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಮಾನ್ಯತೆ ಮಾಡಿದೆ
* ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ
* ಕಂದಾಯ ದಾಖಲೆ ಪ್ರಕಾರ
* ಮಸೀದಿ ಅಡಿಪಾಯದ ಕೆಳಗೆ ವಿಶಾಲವಾದ ರಚನೆ ಇತ್ತು, ಇದು ಇಸ್ಲಾಂಮಿಕ ರಚನೆ ಆಗಿರಲಿಲ್ಲ
* ಉತ್ಖನನ ವೇಳೆ ಸಿಕ್ಕ ಕಲಾಕೃತಿಗಳು ಇಸ್ಲಾಮಿಕ್ ಅಗಿರಲಿಲ್ಲ
* ಹಿಂದುಗಳು ಅಯೋಧ್ಯೆಯನ್ನು ರಾಮ ಜನ್ಮ ಭೂಮಿ ಎಂದು ನಂಬುತ್ತಾರೆ, ವಿವಾದಿತ ಜಾಗದಲ್ಲೇ ಹಿಂದುಗಳು ಪೂಜೆ ಮಾಡುತ್ತಾ ಬಂದಿದ್ದಾರೆ.
* ಕಾನೂನಿನ ಸಾಕ್ಷ್ಯದ ಆಧಾರ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ.
* ವಿವಾಧಿತ ಪ್ರದೇಶದಲ್ಲಿ 1856 ರಿಂದ1857ರವರೆಗೆ ನಮಾಜ್ ಮಾಡಲಾಗುತ್ತಿತ್ತು ಅನ್ನುವುದಕ್ಕೆ ಸಾಕ್ಷಿ ಇಲ್ಲ.