ನವದೆಹಲಿ, ನ 09 (Daijiworld News/MSP): ದೇಶ ಬಹುಕಾಲದಿಂದ ಕಾಯುತ್ತಿರುವ, ಶತಮಾನಗಳ ವಿವಾದ, ರಾಜಕೀಯ ಮತ್ತು ಧಾರ್ಮಿಕವಾಗಿ ಬಹುಸೂಕ್ಷ್ಮವಾಗಿರುವ ಅಯೋಧ್ಯ ತೀರ್ಪು ಹೊರಬಿದ್ದಿದೆ. ವಿವಾದಿತ ಜಮೀನು ರಾಮ ಲಲ್ಲಾ ಪಾಲಾಗಿದೆ.
ಮಾತ್ರವಲ್ಲದೆ, ಸರ್ಕಾರ ವಿಶೇಷಾಧಿಕಾರ ಬಳಸಿ 3 ತಿಂಗಳೊಳಗೆ ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯವಾಗಿ ರಾಜ್ಯ ಅಥವಾ ಕೇಂದ್ರ ಸರ್ಕಾರ 5ಎಕರೆ ಜಮೀನು ನೀಡಬೇಕು ಎಂದು ಸಾಂವಿಧಾನಿಕ ಪೀಠ ಆದೇಶಿಸಿದೆ. ಇಲ್ಲಿ ಮಸೀದಿ ನಿರ್ಮಾಣ ಮಾಡುವುದು ಬಿಡುವುದು ಸಮುದಾಯಕ್ಕೆ ಬಿಟ್ಟದ್ದು ಎಂದಿದೆ.