ನವದೆಹಲಿ, ನ 09 (Daijiworld News/MSP): ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದು ಈ ಬಗ್ಗೆ ಅಯೋಧ್ಯೆ ಪ್ರಕರಣದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೌರವಾನ್ವಿತ ಸುಪ್ರೀಂ ಕೋರ್ಟ್ ಅಯೋಧ್ಯೆ ವಿಷಯದ ಬಗ್ಗೆ ತೀರ್ಪು ನೀಡಿದೆ. ಶಾಂತಿ ಸಂಯಮ ಜಗತ್ತಿಗೆ ತೋರಿಸಿಕೊಡಬೇಕಾಗಿದೆ. ಈ ತೀರ್ಪನ್ನು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ನೋಡಬಾರದು. ಈ ತೀರ್ಪಿನಿಂದ ದೇಶದ ನ್ಯಾಯ ಪ್ರಕ್ರಿಯೆಯ ಮೇಲೆ ಜನರ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಇಲ್ಲಿ ರಾಮ್ ಭಕ್ತಿ ಅಥವಾ ರಹೀಮ್ ಭಕ್ತಿ ಆಗಿರಲಿ, ಎಲ್ಲಕ್ಕಿಂತಲೂ ನಾವು ರಾಷ್ಟ್ರಭಕ್ತಿಯ ಮನೋಭಾವವನ್ನು ಬಲಪಡಿಸುವುದು ಮುಖ್ಯವಾಗಿದೆ..ಶಾಂತಿ ಮತ್ತು ಸಾಮರಸ್ಯ ಮೇಲುಗೈ ಸಾಧಿಸಲಿ! ಎಂದು ಸರಣಿ ಟ್ವೀಟ್ ಮಾಡಿದ್ದಾರೆ.