ನವದೆಹಲಿ, ನ 09 (Daijiworld News/MSP): ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್ ಇಂದು ತೀರ್ಪು ಪ್ರಕಟ ಮಾಡಿದೆ. ಸುಪ್ರೀಂಕೋರ್ಟ್ ವಿವಾದಿತ ಅಯೋಧ್ಯೆ 2.75 ಎಕರೆ ಜಾಗವನ್ನು ಅರ್ಜಿದಾರರಾಗಿರುವ ರಾಮಲಲ್ಲಾಗೆ ನೀಡಿದೆ.
ಆದರೆ, ರಾಮಲಲ್ಲಾಗೆ ಮಂದಿರ ನಿರ್ಮಾಣದ ಹಕ್ಕಿಲ್ಲ ಎಂದು ಹೇಳಿದೆ. ವಿವಾದಿತ ಜಾಗವನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಬೇಕು ಮಾತ್ರವಲ್ಲದೇ ಸರ್ಕಾರ ಇನ್ನು ಮೂರು ತಿಂಗಳೊಳಗಡೆ ಸಮಿತಿ ರಚನೆ ಮಾಡಬೇಕು. ನಂತರ ಈ ಜಾಗ ಟ್ರಸ್ಟ್ಗೆ ಹಸ್ತಾಂತರವಾಗಲಿದೆ. ಆ ಬಳಿಕ ಸಮಿತಿಯ ಮೇಲುಸ್ತುವಾರಿಯಲ್ಲೇ ಮಂದಿರ ನಿರ್ಮಾಣವಾಗಬೇಕು. ಇದರಲ್ಲಿ ಬೇರೆ ಯಾರಿಗೂ ಮೂಗು ತೂರಿಸುವ ಅಧಿಕಾರವಿಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.
ಹಾಗದ್ರೆ ಯಾರು ರಾಮ್ ಲಲ್ಲಾ
ಅಯೋಧ್ಯೆ ಪ್ರಕರಣ ಮೂರು ಮುಖ್ಯ ಕಕ್ಷಿದಾರಿದ್ದರು.. ನಿರ್ಮೊಹಿ ಅಕರ(ದೇವಸ್ಥಾನದ ವ್ಯವಸ್ಥಾಪಕರು), ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್(ಎಲ್ಲಾ ವಕ್ಫ್ ಗಳ ಆಡಳಿತಾಧಿಕಾರಿಗಳು) ಮತ್ತು ರಾಮ್ ಲಲ್ಲಾ. ರಾಮ್ ಲಲ್ಲಾ ಈ ಕೇಸಿನಲ್ಲಿ ಪ್ರವೇಶವಾಗಿದ್ದು 1980ರಲ್ಲಿ, ಅದು ಅಲಹಾಬಾದ್ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಮತ್ತು ರಾಮ ದೇವರ ಪರಮ ಭಕ್ತರಾಗಿರುವ ದಿಯೊಕಿ ನಂದನ್ ಅಗರ್ವಾಲ್ ಮೂಲಕ.
ರಾಮಲಲ್ಲಾ ಅಂದರೆ ಬೇರೆ ಯಾವ ವ್ಯಕ್ತಿಯೂ ಅಲ್ಲ ಅದು ಬಾಲ ರಾಮ! - ಕಾನೂನಿನ ಪ್ರಕಾರ ದೇವರು ಅಪ್ರಾಪ್ತ. ಅಂದರೆ ದೇವರಿಗೆ ತಾವಾಗಿಯೇ ವರ್ತಿಸಲು ಆಗುವುದಿಲ್ಲ. ಅವರಿಗೊಬ್ಬರು ಪೋಷಕರು ಬೇಕಾಗುತ್ತದೆ. ಹೀಗಾಗಿ ದೇವರನ್ನು ಕಾನೂನಿನಲ್ಲಿ ಅಪ್ರಾಪ್ತ ಎಂದು ಪರಿಗಣಿಸಲಾಗುತ್ತದೆ. (ದೇವರು ಮತ್ತು ಆತನ ಸೇವಕನ ನಡುವಿನ ಸಂಬಂಧ ಅಪ್ರಾಪ್ತರು ಮತ್ತು ಅವರ ಪೋಷಕರ ನಡುವಿನ ಸಂಬಂಧದಂತೆ.) ಹೀಗಾಗಿ ಅರ್ಜಿದಾರ ರಾಮಲಲ್ಲಾ ವಾದ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ವಿವಾದಿತ ಅಯೋಧ್ಯೆ ಜಾಗವನ್ನು ರಾಮಲಲ್ಲಾಗೆ ನೀಡಿದೆ. ಆದರೆ, ರಾಮಲಲ್ಲಾಗೆ ಮಂದಿರ ನಿರ್ಮಾಣದ ಹಕ್ಕಿಲ್ಲ ಎಂದು ಹೇಳಿದೆ.