ನವದೆಹಲಿ, ನ 10 (Daijiworld News/MB):ಹಲವು ವರ್ಷಗಳಿಂದ ನಡೆಯುತ್ತಿರುವ ಹಿಂದೂ-ಮುಸ್ಲಿಂ ನಡುವಿನ ವಿವಾದ ಇಲ್ಲಿಗೆಯೇ ಅಂತ್ಯವಾಗಬೇಕು. ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ನಾನು ಸಮ್ಮತಿ ನೀಡುವುದಿಲ್ಲ ಎಂದು ದೆಹಲಿಯ ಜಾಮಾ ಮಸೀದಿ ಶಾಹಿ ಇಮಾಂ ಸೈಯದ್ ಅಹಮದ್ ಬುಖಾರಿ ನ 9ರ ಶನಿವಾರ ತಿಳಿಸಿದ್ದಾರೆ.
ಈ ತೀರ್ಪನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳುತ್ತದೆ. ದೇಶದ ಮುಸ್ಲಿಮರು ಶಾಂತಿ, ನೆಮ್ಮದಿಯ ಬದುಕು ಬಯಸುತ್ತಿದ್ದಾರೆ. ಈಗಾಗಲೇ ಅಯೋಧ್ಯೆ ಕುರಿತ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಿದರೂ ಅದನ್ನು ಸ್ವೀಕರಿಸುವುದೆಂದು ಸ್ಪಷ್ಟಪಡಿಸಿದೆ ಎಂದು ಬುಖಾರಿ ಹೇಳಿದ್ದಾರೆ.
ಅವರು ಅಯೋಧ್ಯೆ ತೀರ್ಪು ಬರುವ ಮೊದಲೇ ತೀರ್ಪು ಯಾರ ಪರವಾಗಿ ಬಂದರೂ ನಾವು ಸ್ವಾಗತಿಸುತ್ತೇವೆ. ಮುಸ್ಲಿಂ ಸಮುದಾಯ ಶಾಂತಿ ಪ್ರಿಯರು ಎಂದು ಹೇಳಿದ್ದರು.