ಮಹಾರಾಷ್ಟ್ರ, ನ 10 (Daijiworld News/MB) : 'ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ, ಶಿವಸೇನೆ ಸರ್ಕಾರ ರಚಿಸಲು ಹಕ್ಕು ಮಂಡನೆ ಮಾಡುತ್ತದೆ' ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಹೇಳಿದ್ದಾರೆ.
'ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆ. ರಾಜ್ಯಪಾಲರ ಮಧ್ಯಪ್ರವೇಶದಿಂದ ರಾಜ್ಯದಲ್ಲಿ ಸರ್ಕಾರ ರಚನೆಯ ವಿಶ್ವಾಸ ಬಂದಿದೆ. ಬಿಜೆಪಿ ಸರಕಾರ ರಚನೆ ಮಾಡಲು ಬಹುಮತ ಇರುವ ವಿಶ್ವಾಸ ಇದಿದ್ದರೆ 24 ಗಂಟೆಯಲ್ಲಿ ಯಾಕೆ ಹಕ್ಕು ಮಂಡನೆ ಮಾಡಿಲ್ಲ ಎಂದು ನನಗೆ ತಿಳಿಯುತ್ತಿಲ್ಲ' ಎಂದು ಅವರು ಹೇಳಿದರು.
'50-50 ಅಧಿಕಾರ ಹಂಚಿಕೆಗೆ ಬಿಜೆಪಿ ಒಪ್ಪುತ್ತಿಲ್ಲ. ಸರ್ಕಾರ ರಚಿಸುವಲ್ಲಿ ಮಹಾರಾಷ್ಚ್ರದಲ್ಲಿ ಬಿಜೆಪಿ ವಿಫಲಗೊಂಡರೆ, ಶಿವಸೇನೆ ಸರಕಾರ ರಚಿಸುವ ಜವಾಬ್ದಾರಿ ಹೊರುತ್ತದೆ' ಎಂದರು.
'ಎಲ್ಲರೂ ರಾಜ್ಯದಲ್ಲಿ ಸ್ಥಿರ ಸರಕಾರ ನಡೆಸಲು ಬಯಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ನಮ್ಮ ಶತ್ರುಗಳಲ್ಲ. ನಮ್ಮ ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯವಿದೆ ಅಷ್ಟೆ. ಎಲ್ಲರೂ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ' ಎಂದು ತಿಳಿಸಿದರು.
ಈ ಕುರಿತು ಕಾಂಗ್ರೆಸ್ ನಾಯಕ ಮಿಲಿಂದ್ ದೇವೊರಾ ಟ್ವೀಟ್ ಮಾಡಿ 'ಬಿಜೆಪಿ ಮತ್ತು ಶಿವಸೇನೆ ಸರಕಾರ ರಚಿಸಲು ಇನ್ನೂ ತಡಮಾಡಿದರೆ, ಎರಡನೇ ದೊಡ್ಡ ಮೈತ್ರಿ ಪಕ್ಷವಾದ ಕಾಂಗ್ರೆಸ್ ಮತ್ತು ಎನ್ ಸಿ ಪಿ ಗೆ ರಾಜ್ಯಪಾಲರು ಸರಕಾರ ನಡೆಸಲು ಆಹ್ವಾನಿಸಬೇಕು' ಎಂದಿದ್ದಾರೆ.