ನವದೆಹಲಿ, ನ 11 (Daijiworld News/MSP): ಸುಪ್ರೀಂಕೋರ್ಟ್ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ದೊರಕಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಶೀಘ್ರವೇ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಜೊತೆಗೆ ನಮ್ಮ ವಿನ್ಯಾಸದಂತೆಯೇ ನಿರ್ಮಾಣವಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
1989ರಲ್ಲಿಯೇ ದೇವಾಲಯ ವಿನ್ಯಾಸವನ್ನು ತಯಾರಿಸಿ ವಿಶ್ವಹಿಂದು ಪರಿಷತ್ ದೇಶಾದ್ಯಂತ ಪಸರಿಸಿತ್ತು. ಅಂದಿನ ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಅಶೋಕ್ ಸಿಂಘಾಲ್ ನೇತೃತ್ವದಲ್ಲಿ ರಾಮಮಂದಿರದ ರೂಪುರೇಷೆ ಸಿದ್ದಾವಾಗಿತ್ತು . ಇದನ್ನು ಚಂದ್ರಕಾಂತ್ ಸೋಮಪುರ ಎಂಬವರು ನೀಲನಕ್ಷೆ ಸಿದ್ದಪಡಿಸಿದ್ದರು ಎಂದು ವಿಎಚ್ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ.
ಮಂದಿರ ನಿರ್ಮಾಣಕ್ಕಾಗಿ ಕಲ್ಲುಗಳನ್ನು ಕೊರೆಯುವುದು ಹಾಗೂ ಕಂಬಗಳನ್ನು ನಿಲ್ಲಿಸುವ ಕೆಲಸ ಪ್ರಗತಿಯಲ್ಲಿದ್ದು ಕೇಂದ್ರ ಸರ್ಕಾರ ಮಂದಿರ ನಿರ್ಮಿಸಲು ಕಟ್ಟಡ ಇದನ್ನು ಬಳಸಿಕೊಳ್ಳಬೇಕು. ದೇವಾಲಯ ನಿರ್ಮಾಣ ಕಾರ್ಯ ಅದಷ್ಟು ಶೀಘ್ರ ಕೈಗೆತ್ತಿಗೊಳ್ಳಬೇಕು ಎಂಬಿತ್ಯಾದಿ ತೀರ್ಮಾನಗಳನ್ನು ವಿಶ್ವಹಿಂದು ಪರಿಷತ್ ವಿಶೇಷ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಸುಪ್ರೀಂ ನೀಡಿದ ತೀರ್ಪಿನಂತೆ ರಾಮಮಂದಿರ ನಿರ್ಮಾಣ ವಿಚಾರವಾಗಿ, ಕೇಂದ್ರ ಸರ್ಕಾರ ಹಾಗೂ ಉತ್ತರಪ್ರದೇಶ ಸರ್ಕಾರವೂ ಪ್ರಾಮಾಣಿಕ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ವಿಶ್ವಾಸವನ್ನು ವಿಶ್ವಹಿಂದು ಪರಿಷತ್ ವ್ಯಕ್ತಪಡಿಸಿದೆ.