ಚಿಕ್ಕಮಗಳೂರು, ನ.11(Daijiworld News/SS): ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಆಸಕ್ತಿ ತೋರಿಸಿದ್ದಾರೆ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 5ರಂದು ರಾಜ್ಯದಲ್ಲಿ ಉಪಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನ ಹಾಗೂ ನಂತರದಲ್ಲಿ ಕೆಲ ಕಾಂಗ್ರೆಸ್ ನಾಯಕರು ಬಿಜೆಪಿಗೆ ಬರಲಿದ್ದಾರೆ. ಅವರೆಲ್ಲಾ ನಮ್ಮ ಪಕ್ಷದ ಸಿದ್ದಾಂತವನ್ನು ಒಪಿಯೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಯಾವುದೂ ಕದ್ದು ಮುಚ್ಚಿ ನಡೆಯಲ್ಲ. ಎಷ್ಟು ಜನ ಬರ್ತಾರೆ ಎನ್ನೋದು ಮುಂದೆ ನಿಮಗೆ ತಿಳಿಯಲಿದೆ. ಮತ್ತೆ ಅವರು ಯಾರೂ ವ್ಯವಹಾರ ದೃಷ್ಟಿಯಿಂದ ಬರಲ್ಲ. ಎಲ್ಲರೂ ವೈಚಾರಿಕ ಹಿನ್ನೆಲೆಯಲ್ಲಿಯೇ ಬರ್ತಾರೆ. ಕಾಂಗ್ರೆಸ್ ಶಾಸಕರು, ನಾಯಕರು ಬಿಜೆಪಿಗೆ ಆಗಮಿಸುವುದರೊಡನೆ ಕಾಂಗ್ರೆಸ್ ಇಬ್ಬಾಗವಾಗಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚು ಸ್ಥಾನ ಗಳಿಸಿ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರ ಭವಿಷ್ಯ ಎಷ್ಟು ಬಾರಿ ನಿಜವಾಗಿದೆ..? ನೆಲಕ್ಕೆ ಬಿದ್ರೂ ಮೀಸೆ ಮಣ್ನಾಗಿಲ್ಲ ಅನ್ನೋ ಗಾದೆಮಾತು ಅವರಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.