ಮಹಾರಾಷ್ಟ್ರ, ನ 11 (Daijiworld News/MB): ಎನ್ ಡಿ ಎ ಮೈತ್ರಿಕೂಟದಿಂದ ಶಿವಸೇನೆ ಹೊರಬಂದಿದ್ದು ಎನ್ ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಸರಕಾರ ರಚನೆಗೆ ಮುಂದಾಗಿದೆ. ಈ ನಡುವೆ ಟ್ವೀಟರ್ ನಲ್ಲಿ ಶಿವಸೇನೆ ಮಹಾರಾಷ್ಟ್ರಕ್ಕೆ ದ್ರೋಹ ಮಾಡುತ್ತಿದೆ ( ಶಿವಸೇನೆ ಚೀಟ್ಸ್ ಮಹಾರಾಷ್ಟ್ರ) ಎಂಬ ಹ್ಯಾಶ್ ಟಾಗ್ ಟ್ರೆಂಡಿಗ್ ನಲ್ಲಿ ಇದೆ.
ಶಿವಸೇನೆಯ ನಾಯಕ ಸಂಸದ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಅರವಿಂದ್ ಸಾವಂತ್ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಈ ಕುರಿತು ಟ್ವೀಟರ್ ನಲ್ಲಿ ಟ್ವೀಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
'ಶಿವ ಸೇನೆ ಅಧಿಕಾರದ ದುರಾಸೆಯಿಂದ ಹಿಂದುತ್ವವನ್ನೆ ಮರೆತು ಬಿಟ್ಟಿದೆ. ಬಿಜೆಪಿ ಮತದಾರರು ಶಿವಸೇನೆಯ ಅಭ್ಯರ್ಥಿಗಳಿಗೆ ಮತ ಹಾಕಿದ್ದು ಈ ಮತದಾರರಿಗೆ ಶಿವಸೇನೆ ಮೋಸ ಮಾಡುತ್ತಿದೆ. ಸಿಎಂ ಹುದ್ದೆಯೇ ಬೇಕೆಂದು ಹೇಳುವ ಶಿವಸೇನೆ ಜನಾದೇಶಕ್ಕೆ ಮೋಸ ಮಾಡುತ್ತಿದ್ದಾರೆ’ ಎಂದು ಟ್ವೀಟ್ ಮೂಲಕ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
‘1995ರಲ್ಲಿ ಶಿವಸೇನೆ ಗೆಲುವು ಸಾಧಿಸಿಕ್ಕಿಂತ 8 ಸ್ಥಾನ ಕಡಿಮೆ ಇತ್ತು. ಹಾಗಾಗಿ ಬಿಜೆಪಿ ಆ ಸಂದರ್ಭದಲ್ಲಿ ವಾಸ್ತವತೆಯನ್ನು ಅರಿತು ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದೆ. ಆದರೆ 2019ರಲ್ಲಿ ಬಿಜೆಪಿಗೆ 105 ಸೀಟುಗಳಿದ್ದು, ಶಿವ ಸೇನೆಗೆ 56 ಸೀಟುಗಳು ಮಾತ್ರ ಇದೆ ಆದರೂ ಶಿವಸೇನೆ ಮುಖ್ಯಮಂತ್ರಿ ಸ್ಥಾನ ತನಗೆ ಸಿಗಬೇಕು. ಇಲ್ಲದಿದ್ದಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದೆ ಎಂದು ‘ಶಿವಸೇನೆ ಮಹಾರಾಷ್ಟ್ರಕ್ಕೆ ದ್ರೋಹ ಮಾಡುತ್ತಿದೆ’ ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.
ಶಿವಸೇನೆ ಸಂಸದ ಸಂಜಯ್ ರಾವತ್ ’ಬಿಜೆಪಿ ನೇತೃತ್ವದ ಎನ್'ಡಿಎ ಜೊತೆಗಿನ ಮೈತ್ರಿಕೂಟದಿಂದ ಶಿವಸೇನೆ ಹೊರಬರಲು ನಿರ್ಧರಿಸಿದೆ. ಕಾಂಗ್ರೆಸ್ ಹಾಗೂ ಎನ್'ಸಿಪಿ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು ಶಿವಸೇನೆ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.