ಗುರುಗ್ರಾಮ,ನ 11 (Daijiworld News/MSP): ಗುರುಗ್ರಾಮದಲ್ಲಿ ಪರೀಕ್ಷೆಗೆಂದು ಬಂದಿದ್ದ 24 ವರ್ಷದ ಯುವತಿ ಮೇಲೆ ಆಕೆಯ ಸೋದರ ಸಂಬಂಧಿಯೇ ಅತ್ಯಾಚಾರ ನಡೆಸಿದ ಅಘಾತಕಾರಿ ಘಟನೆ ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಯುವತಿ ತನ್ನೂರು ಮಹೇಂದ್ರಗಢದಿಂದ ಸಪ್ಟೆಂಬರ್ 22ರಂದು ಪರೀಕ್ಷೆ ಬರೆಯಲೆಂದು ಗುರುಗ್ರಾಮಕ್ಕೆ ಬಂದಿದ್ದಾಳೆ. ಈ ವೇಳೆ ಪರೀಕ್ಷಾ ಕೇಂದ್ರದಲ್ಲಿ ಆಕೆಯ ದೂರದ ಸೋದರ ಸಂಬಂಧಿ ಭೇಟಿಯಾಗಿದ್ದಾರೆ. ಈ ವೇಳೆ ತಾನು ಹೊಟೇಲ್ ರೂಂನಲ್ಲಿ ತಂಗಿದ್ದು, ಮರುದಿನವೂ ಪರೀಕ್ಷೆ ಇರುವ ಕಾರಣ ತನ್ನ ರೂಂಗೆ ಬರುವಂತೆ ಮನವೊಲಿಸಿ ಬಸ್ ನಿಲ್ದಾಣದ ಸಮೀಪವಿರುವ ಹೋಟೆಲ್ ಗೆ ಕರೆತಂದಿದ್ದಾನೆ. ಬಳಿಕ ರಾತ್ರಿ ಮಲಗಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಘಟನೆಯನ್ನು ಬಹಿರಂಗಪಡಿಸಿದರೆ ಪರಿಣಾಮ ನೆಟ್ಟಿಗಿರಲ್ಲ ಎಂದು ಎಂದು ಸಂಬಂದಿ ಬೆದರಿಕೆ ಹಾಕಿದ್ದ.
ಮರುದಿನವೂ ಪರೀಕ್ಷೆ ಇದ್ದಿದ್ದರಿಂದ ಆ ಯುವತಿ ಸುಮ್ಮನಾಗಿದ್ದು, ಪರೀಕ್ಷೆ ಬರೆದು ಊರಿಗೆ ತೆರಳಿದ್ದಾಳೆ. ಅಲ್ಲಿ ಕೆಲವು ದಿನಗಳವರೆಗೆ ಏಕಾಂಗಿಯಾಗಿ ಮಾನಸಿಕಯಾತನೆ ಅನುಭವಿಸಿ ಬಳಿಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ .ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಮಹೇಂದ್ರಘಡದಲ್ಲಿ ನೋಂದಾಯಿಸಲಾದ ಎಫ್ಐಆರ್ ಅನ್ನು ಗುರುಗ್ರಾಮದ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತನಿಖೆ ಆರಂಭಿಕ ಹಂತದಲ್ಲಿದ್ದು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಲಾಗಿದೆ ”ಎಂದು ಗುರಗ್ರಾಮ ಪೊಲೀಸ್ ಪಿಆರ್ ಓ ಸುಭಾಷ್ ಬೊಕಾನ್ ಹೇಳಿದ್ದಾರೆ.