ಮುಂಬೈ, ನ 11 (DaijiworldNews/SM): ಭಾರತ ರತ್ನ ಪುರಸ್ಕೃತ ಹಾಗೂ ಬಾಲಿವುಡ್ ನ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಏರುಪೇರಾಗಿದ್ದು, ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
90 ವರ್ಷದ ಲತಾ ಮಂಗೇಶ್ಕರ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇದೀಗ ಅವರ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದ್ದು, ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲತಾ ಮಂಗೇಶ್ಕರ್ ಅವರು ಹಿಂದಿ ಮಾತ್ರವಲ್ಲದೆ, ದೇಶದ 36ಕ್ಕೂ ಅಧಿಕ ಭಾಷೆಗಳಲ್ಲಿ ಅವರು ಹಾಡುವ ಮೂಲಕ ಇಡೀ ದೇಶದ ಜನತೆಯ ಗಮನ ಸೆಳೆದಿದ್ದಾರೆ. ಹಾಗೂ ದೇಶದ ಜನತೆಯ ಮನಗೆದ್ದಿದ್ದಾರೆ.