ವಿಜಯಪುರ, ನ.12(Daijiworld News/SS): ಬಿಜೆಪಿಯವರಿಗೆ ಕೇಂದ್ರದಿಂದ ಹಣ ತರೋ ತಾಕತ್ತಿಲ್ಲ, ಬರೀ ಮಾತಾಡ್ತಾರೆ. ಇವತ್ತಿನ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.
ಬಿಜೆಪಿ ಸರ್ವಾಧಿಕಾರಿ ಧೋರಣೆಯ ಪಕ್ಷ ಎಂಬುದು ಈಗ ಮೈತ್ರಿ ಪಕ್ಷಗಳಿಗೆ ಮನವರಿಕೆ ಆಗತೊಡಗಿದೆ. ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಬಿಜೆಪಿ ಈಗ ಮೈತ್ರಿ ಮುರಿದುಕೊಂಡಿದೆ. ಬಿಜೆಪಿ ಕೋಮುವಾದಿ ಅಷ್ಟೆ ಅಲ್ಲ, ಅದು ಸರ್ವಾಧಿಕಾರಿ ಪಕ್ಷ ಎಂದು ದೂರಿದರು.
ರಾಜ್ಯದ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಳಂಬ ಆಗಿಲ್ಲ. ಕೆಲವು ಕ್ಷೇತ್ರಗಳಲ್ಲಿ ಸುಪ್ರೀಂಕೋರ್ಟ್ ನಿರ್ಣಯ ನೋಡಿ ತೀರ್ಮಾನ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿಗೆ ಇನ್ನಷ್ಟು ಶಾಸಕರು ಬರೋದಾಗಿ ಸಿಟಿ ರವಿ ಹೇಳಿರುವ ವಿಚಾರದಲ್ಲಿ ಮಾತನಾಡಿದ ಅವರು, ನಿಮ್ಮ ಪಕ್ಷದವರು ಮಾತ್ರ ಇಂಥ ಹೇಳಿಕೆ ನೀಡಲು ಸಾಧ್ಯ. ಬಿಜೆಪಿಗೆ ಬರೀ ಪಕ್ಷಾಂತರ ಮಾಡಿಸೋದೆ ನಿಮ್ಮ ಕೆಲಸ ಆಗಿದೆ. ನಿಮ್ಮ ಉಡಾಫೆ ಮಾತಿಗೆ ಜನ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹದಿನೈದು ಶಾಸಕರನ್ನು ಮೂರು ದಿನದಲ್ಲಿ ಮಂತ್ರಿ ಮಾಡ್ತಿವಿ ಅಂತ ನಂಬಿಸಿದ್ದರು. ಈಗ ಅವರ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.