ಚಿಕ್ಕಮಗಳೂರು, ನ 12 (Daijiworld News/ MB) : ಜ್ಯೂಸ್ ಎಂದು ತಿಳಿದು ಕೀಟನಾಶಕವನ್ನು ಕುಡಿದು ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ನಡೆದಿದೆ.
ಸಾವನ್ನಪ್ಪಿದ್ದ ಮಗು ಅಗಸ್ತ್ಯ (3) ಪ್ರವೀಣ್-ಪೂಜಿತ ದಂಪತಿಯ ಪುತ್ರ.
ಅಕ್ಟೋಬರ್ 24ರಂದು ಕಳೆನಾಶಕ ಸೇವಿಸಿದ್ದ ಈ ಮಗು ಸುಮಾರು 18 ದಿನಗಳ ಕಾಲ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದ ಕಾರಣ ಮಗು ಸಾವನ್ನಪ್ಪಿದೆ.
ಈ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.