ನವದೆಹಲಿ, ನ 09 (DaijiworldNews/SM): ರಾಜ್ಯದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಮೈತ್ರಿ ಸರಕಾರದ ಪತನಕ್ಕೆ ಕಾರಣರಾದಿದ್ದ ಹದಿನೇಳು ಮಂದಿ ಅನರ್ಹರ ಅರ್ಜಿ ಸಂಬಂಧಿಸಿದ ತೀರ್ಪು ನವಂಬರ್ 13ರ ಬುಧವಾರ ಪ್ರಕಟಗೊಳ್ಳಲಿದ್ದು, 17 ಅನರ್ಹ ಶಾಸಕರ ಭವಿಷ್ಯ ನಾಳೆ ನಿರ್ಧಾರಗೊಳ್ಳಲಿದೆ.
ನವಂಬರ್ 9ರ ಶನಿವಾರದಂದು ತೀರ್ಪು ಪ್ರಕಟಿಸುವುದಾಗಿ ಕೋರ್ಟ್ ಹೇಳಿತ್ತು. ಆದರೆ, ನವಂಬರ್ 9ರ ಶನಿವಾರದಂದು ಐತಿಹಾಸಿಕ ಅಯೋಧ್ಯೆ ವಿವಾದದ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ರೆಬೆಲ್ ಶಾಸಕರ ಕುರಿತ ತೀರ್ಪು ಪ್ರಕಟವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.
ಆದರೆ, ಪ್ರಮುಖ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಅನರ್ಹರ ಅರ್ಜಿ ಕುರಿತ ತೀರ್ಪು ಪ್ರಕಟಿಸುವುದನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಈಗಾಗಲೇ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ, ತೀರ್ಪು ಪ್ರಕಟಿಸಲು ಹತ್ತು ದಿನಗಳ ಕಾಲಾವಕಾಶ ಹೇಳಿತ್ತು. ಇದೀಗ ಬುಧವಾರದಂದು ತೀರ್ಪು ಪ್ರಕಟಗೊಳ್ಳಲಿದ್ದು, ಬಳಿಕ ಅನರ್ಹ ಶಾಸಕರ ಭವಿಷ್ಯ ನಿರ್ಧಾರಗೊಳ್ಳಲಿದೆ.
ಒಂದೆಡೆ, ಅನರ್ಹ ಶಾಸಕರ ಅರ್ಜಿ ಕುರಿತು ಈಗಾಗಲೇ ವಾದ - ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಮತ್ತೊಂದೆಡೆ ತೀರ್ಪಿಗಾಗಿ ಅನರ್ಹ ಶಾಸಕರು ಎದುರು ನೋಡುತ್ತಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡುತ್ತದೆ ಎಂಬುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸುಪ್ರೀಂ ತೀರ್ಪಿನತ್ತ ಅನರ್ಹರ ಚಿತ್ತ ನೆಟ್ಟಿದೆ.
ಇನ್ನು ಈ ಹಿಂದೆ ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಮೈತ್ರಿ ಸರಕಾರದ ವಿರುದ್ಧ ನಿಂತಿದ್ದ ಹದಿನೇಳು ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಪೈಕಿ ಕಾಂಗ್ರೆಸ್ ಪಕ್ಷದ 14 ಹಾಗೂ ಜೆಡಿಎಸ್ನ 3 ಶಾಸಕರು ಅನರ್ಹಗೊಂಡಿದ್ದರು. ಇದನ್ನು ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಇನ್ನೊಂದೆಡೆ ಉಪ ಚುನಾವಣೆ ಹತ್ತಿರವಾಗುತ್ತಿದೆ. ಸೋಮವಾರದಿಂದ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ನವಂಬರ್ 18ರಂದು ಕೊನೆಗೊಳ್ಳಲಿದೆ. ಈ ನಡುವೆ ನಾಮಪತ್ರ ಸಲ್ಲಿಕೆಗೂ ದಿನಾಂಕ ನಿಗಧಿಯಾಗಿದೆ. ಆದರೆ, ಸುಪ್ರೀಂನಿಂದ ತೀರ್ಪು ಬರದಿರೋವುದು ಅನರ್ಹರಿಗೆ ಭೀತಿಯನ್ನುಂಟು ಮಾಡಿದೆ. ಇದೀಗ ತೀರ್ಪು ಯಾರ ಪರವಾಗಿ ಬರುತ್ತೇ ಎಂಬ ಕುತೂಹಲ ಮೂಡಿದ್ದು, ಅನರ್ಹರ ಎದೆಯಲ್ಲಿ ನಡುಕ ಉಂಟಾಗಿದೆ.